ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ: ಮತದಾನದಿಂದ ಮತ್ತೆ ದೂರವುಳಿದ ಭಾರತ
ವಿಶ್ವಸಂಸ್ಥೆ: ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಮೂರನೇ ಎರಡರಷ್ಟು ಮತಗಳಿಂದ ಅಂಗೀಕರಿಸಲ್ಪಟ್ಟ ರಷ್ಯಾ ಮೇಲಿನ ಉಕ್ರೇನ್ ಆಕ್ರಮಣ ವಿರೋಧಿ ನಿರ್ಣಯದಿಂದ ಭಾರತ ಮತ್ತೆ ದೂರವುಳಿದಿದೆ.
ಮತದಾನವು ಆಕ್ರಮಣದ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು ಗುರುವಾರ ನಡೆಯಿತು.
ಆ ಸಭೆಯಿಂದ ಜನರಲ್ ಅಸೆಂಬ್ಲಿ ಚೇಂಬರ್‌ಗೆ ಧಾವಿಸಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಭಾರತದ ಗೈರುಹಾಜರಿಯ ಬಗ್ಗೆ ವಿವರಿಸುತ್ತಾ, "ನಾವು ಯಾವಾಗಲೂ ಮಾತುಕತೆ ಮತ್ತು ರಾಜತಾಂತ್ರಿಕತೆ ಮಾರ್ಗ ಮಾತ್ರ ಯುದ್ಧ ಕೊನೆಗಾಣಿಸಲು ಇರುವ ದಾರಿ ಎಂದು ಪರಿಗಣಿಸುತ್ತೇವೆ ಎಂದರು.
"ನಾವು ಇಂದಿನ ನಿರ್ಣಯದ ಉದ್ದೇಶಿತ ಉದ್ದೇಶಗಳನ್ನು ಗಮನಿಸಿದರೆ, ಶಾಶ್ವತ ಶಾಂತಿಯನ್ನು ಭದ್ರಪಡಿಸುವ ನಮ್ಮ ಅಪೇಕ್ಷಿತ ಗುರಿಯನ್ನು ತಲುಪುವಲ್ಲಿ ಕೆಲ ಅಡೆತಡೆಗಳಿವೆ. ಈ ಕಾರಣಗಳಿಂದ ನಾವು ನಿರ್ಣಯದಿಂದ ದೂರವಿದ್ದೇವೆ ಎಂದು ವಿವರಿಸಿದರು.
"ಇದು ಯುದ್ಧದ ಯುಗವಾಗಲು ಸಾಧ್ಯವಿಲ್ಲ" ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಕಾಂಬೋಜ್ ಉಲ್ಲೇಖಿಸಿದರು. ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ತುರ್ತು ಮರಳುವ ಅಗತ್ಯವಿದೆ ಎಂದರು. ನಿರ್ಣಯವನ್ನು 141 ಮತಗಳಿಂದ ಅಂಗೀಕರಿಸಲಾಯಿತು, ಏಳು ವಿರುದ್ಧ ಮತಗಳು ಚಲಾವಣೆಯಾದವು. 32 ಮಂದಿ ಪ್ರತಿನಿಧಿಗಳು ಗೈರಾಗಿದ್ದರು.