ಹೃದಯ ವಿದ್ರಾವಕ ಘಟನೆ; ಬೀದಿನಾಯಿಗಳ ದಾಳಿಗೆ 4 ವರ್ಷದ ಮಗು ಬಲಿ

ಭದ್ರಾವತಿ: ಭದ್ರಾವತಿ ತಾ| ದೊಣಬಘಟ್ಟ ಗ್ರಾಮದಲ್ಲಿ ನಾಯಿಗಳ ಹಿಂಡು ದಾಳಿಗೆ 4 ವರ್ಷದ ಮಗು ಸೈಯದ್ ಮದನಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ. ಸಂಜೆ ಸಮಯದಲ್ಲಿ ಮಗುವಿನ ತಂದೆ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ತಂದೆಯನ್ನು ಮಗು ಹಿಂಬಾಲಿಸಿಕೊಂಡು ಹೋಗುವಾಗ ಸುಮಾರು 7-8 ಬೀದಿ ನಾಯಿಗಳ ಹಿಂಡು ಮಗು ಮೇಲೆ ದಾಳಿ ಮಾಡಿದೆ. ಪರಿಣಾಮ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.