ಕುಕ್ಕರ್ ಸ್ಫೋಟಕ್ಕೂ ಮೊದಲು ಬೆಳ್ತಂಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಸದ್ದು: ಭದ್ರತಾ ದಳ ಫುಲ್ ಅಲರ್ಟ್

ಕುಕ್ಕರ್ ಸ್ಫೋಟಕ್ಕೂ ಮೊದಲು ಬೆಳ್ತಂಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಸದ್ದು: ಭದ್ರತಾ ದಳ ಫುಲ್ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಸ್ಫೋಟಕ್ಕೂ ಮೊದಲು ಉಪಗ್ರಹ ಆಧಾರಿತ ದೂರವಾಣಿ ಕರೆ ವಿನಿಮಯ ಆಗಿದೆ ಎಂಬ ಸಂಶಯದ ಹಿನ್ನಲೆಯಲ್ಲಿ ಆಂತರಿಕ ಭದ್ರತಾ ದಳದವರು ಬೆಳ್ತಂಗಡಿ ಸುತ್ತಮುತ್ತಲಿನ ರಕ್ಷಿತಾರಣ್ಯದಲ್ಲಿ ತನಿಖೆ ನಡೆಸಿದ್ದಾರೆ.

ಕೆಲದಿನಗಳ ಹಿಂದೆ ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದ ಹಿಂದಿನ ದಿನ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಸದ್ದು ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಆಂತರಿಕ ಭದ್ರತಾ ದಳದಿಂದ ತನಿಖೆ ನಡೆದಿದೆ.

ನ.18 ರಂದು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಕರೆ ಸದ್ದು ಮಾಡಿದೆ ಅದಲ್ಲದೆ ಬಂಟ್ವಾಳ ತಾಲೂಕಿನ ಪ್ರದೇಶದಲ್ಲಿ ಕೂಡ ಸ್ಯಾಟಲೈಟ್ ಫೋನ್ ಸದ್ದು ಮಾಡಿದೆ ಎನ್ನಲಾಗಿದೆ. ಮಂಗಳೂರು ಆಂತರಿಕ ಭದ್ರತಾ ದಳದ ಅಧಿಕಾರಿಗಳು ಶುಕ್ರವಾರ ತೋಟತ್ತಾಡಿ ಪರಿಸರದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.