ಫೆ.6 ರಂದು ರಾಜ್ಯಕ್ಕೆ ಮತ್ತೆ 'ಪ್ರಧಾನಿ ಮೋದಿ' ಭೇಟಿ : ಧಾರವಾಡ, ತುಮಕೂರು ಜಿಲ್ಲೆಗೆ ಆಗಮನ

ಫೆ.6 ರಂದು ರಾಜ್ಯಕ್ಕೆ ಮತ್ತೆ 'ಪ್ರಧಾನಿ ಮೋದಿ' ಭೇಟಿ : ಧಾರವಾಡ, ತುಮಕೂರು ಜಿಲ್ಲೆಗೆ ಆಗಮನ

ಬೆಂಗಳೂರು : ಕರ್ನಾಟಕದಲ್ಲಿ ಮತದಾರರನ್ನು ಸೆಳೆಯುತ್ತಿರುವ ಬಿಜೆಪಿ ಈಗಾಗಲೇ ರಾಜ್ಯದ ಹಲವು ಕಡೆ ಭರ್ಜರಿ ಸಮಾವೇಶ, ಪ್ರಚಾರ ನಡೆಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಫೆ.6 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಧಾರವಾಡ, ತುಮಕೂರು ಜಿಲ್ಲೆಗೆ ಭೇಟಿ ನೀಡಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮಕ್ಕೆ ಕಳೆದ ಗುರುವಾರವಷ್ಟೇ ಪ್ರಧಾನಿ ಮೋದಿ ಆಗಮಿಸಿದ್ದರು. ಸಮಾವೇಶದ ವೇದಿಕೆಯಲ್ಲಿ ಪ್ರಧಾನಿ ಮೋದಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದರು. 51900 ಜನರಿಗೆ ಹಕ್ಕು ಪತ್ರ ವಿತರಿಸುವ ಮೂಲಕ ಸರ್ಕಾರ ಹೊಸ ಇತಿಹಾಸ ನಿರ್ಮಾಣ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಇಂದು 51900 ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಬಸವಣ್ಣನವರು ಸಾಮಾಜಿಕ ನ್ಯಾಯಕ್ಕಾಗಿ ಕಾಂತ್ರಿ ಮಾಡಿದ್ದರು. ಬಸವಣ್ಣನವರ ಆಶಯದಂತೆ ಎಲ್ಲ ಸಮುದಾಯದ ಅಭಿವೃದ್ದಿಗೆ ಮುಂದಾಗಿದ್ದೇವೆ.ಈ ಯೋಜನೆಗೆ 1993ರಲ್ಲಿ ಜಾರಿಗೆ ಶೀಫಾರಸ್ಸು ಮಾಡಲಾಗಿತು. ಆದರೆ ಹಕ್ಕು ಪತ್ರ ನೀಡುವ ಬಗ್ಗೆ ವಿಪಕ್ಷಗಳು ಯೋಚನೆ ಮಾಡಲಿಲ್ಲ. ಹಿಂದಿನ ಸರ್ಕಾರ ಓಟ್ ಬ್ಯಾಂಕ್ ಮಾಡುತ್ತಿದ್ದ ಕಾರಣದಿಂದಾಗಿ ಇಂತಹ ಹಕ್ಕು ಪತ್ರ ನೀಡಲು ಮುಂದಾಗಿಲ್ಲ. ಪ್ರತಿಯೊಂದು ಗ್ರಾಮಕ್ಕೂ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಬಂಜಾರ ಸಮುದಾಯ ಬೃಹತ್ ಕೊಡುಗೆ ನೀಡುತ್ತಿದೆ. ಪಿಎಂ ಅವಾಸ್ ಯೋಜನೆ ಮೂಲಕ ಎಲ್ಲ ಸೌಲಭ್ಯ ಸಿಗಲಿದೆ. 1994ರ ಚುನಾವಣಾ ಸಂದರ್ಭದಲ್ಲಿ ನಾನು ಈ ಭಾಗಕ್ಕೆ ಬಂದಿದ್ದೆ ಆಗ ನೀವೆಲ್ಲರೂ ಆರ್ಶೀವಾದ ಮಾಡಿದ್ದೀರಿ ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.