ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಹಿರೇಕೆರೂರ ಪಟ್ಟಣದ ಹಳೇ ಪ್ರವಾಸಿ ಮಂದಿರ ಕೆಡವಿ, ನೂತನ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದು, ಹಳೇ ಪ್ರವಾಸಿ ಮಂದಿರದ ವಸ್ತುಗಳ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. ಹರಾಜಿನಲ್ಲಿ ವಸ್ತುಗಳ ಒಟ್ಟು ಮೊತ್ತ 6 ಲಕ್ಷಕ್ಕೆ  ನಿಗದಿಯಾಗಿತ್ತು,ಆದರೆ  3 ಲಕ್ಷದ 30 ಸಾವಿರಕ್ಕೆ ಮಾತ್ರ ಹರಾಜಾಯಿತು. ಈ ವಿಚಾರವಾಗಿ ಪಿ.ಡಬ್ಲ್ಯೂ. ಡಿ ಎ. ಇ. ಇ ಗೆ ಕೇಳಿದರೆ  ಹರಾಜು ಸರಿಯಾಗಿ  ಆಗಿಲ್ಲ, ಅದನ್ನು ಕಡಿತಗೊಳಿಸಿ ಮರು ಹರಾಜು ಮಾಡುತ್ತೇವೆ ಎಂದರು. ಅದೇ ಏನೇ ಇರಲಿ ಸರಕಾರದ ಹರಾಜನ್ನು ಈ ತರಹ  ಬೇಕಾಬಿಟ್ಟಿಯಾಗಿ  ಮಾಡಿ, ಸರ್ಕಾರದ ಪುಡಿಗಾಸಿನ ಆಸೆಗೆ ಅಧಿಕಾರಿಗಳು ಈ ರೀತಿ ಮಾಡಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.