ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ಆಶಾಕಿರಣ; ಸಚಿವ ಡಾ. ಕೆ. ಸುಧಾಕರ | Chikkaballapur |

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಆಯೋಜಿಸಿದ ಮಿನಿ ಉದ್ಯೋಗ ಮೇಳವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಉದ್ಘಾಟಿಸಿದರು. ನಂತರ ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕೊರೊನಾ ಬಂದತಹ ಸಂದರ್ಭದಲ್ಲಿ ಕಳೆದ ವರ್ಷ ಬಹಳ ಜನರು ಆತಂಕಕ್ಕೆ ಒಳಗಾಗಿದ್ದರು. ಮಿನಿ ಉದ್ಯೋಗ ಮೇಳ ಎಲ್ಲಾ ಆತಂಕದ ನಡುವೆ ಯುವಕರಲ್ಲಿ ಆತ್ಮಸ್ಥೈಯ ತುಂಬುವ ಕೆಲಸ ಮಾಡುತ್ತದೆ. ೨೫ ಕಂಪನಿಗಳು ಉದ್ಯೋಗದಾತರಾಗಿ ಬಂದಿದ್ದಾರೆ. ೭ ರಿಂದ ೮ ಸಾವಿರದಷ್ಟು ಅಪ್ಲಿಕೇಶನ್ಸ್ ಬಂದಿವೆ. ಅದರಲ್ಲಿ ೩ಸಾವಿರ ಅರ್ಜಿಗಳು ಆನ್ಲೈನ್ ಮುಖಾಂತರ ಸಲ್ಲಿಸಿದ್ದಾರೆ ಉಳಿದವರು ಫೋನಿನ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ೧ ಸಾವಿರ ಉದ್ಯೋಗಗಳು ಯುವಕರಿಗೆ ಸಿಗುತ್ತವೆ ಎಂದು ಹೇಳಿದರು ಜಿಲ್ಲಾಧಿಕಾರಿ ಆರ್.ಲತಾ,ನಗರಸಭೆ ಅಧ್ಯಕ್ಷ ಆನಂದಬಾಬುರೆಡ್ಡಿ,ಕಮೀಷನರ್ ಮಹಂತೇಶ್,ಕೌಶಾಲ್ಯಾಬಿವೃದ್ದಿ ಇಲಾಖೆ ಅಧಿಕಾರಿ ಪ್ರಸಾದ್ ಮಾವು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಯ್ಯ ಉಪಸ್ಥಿತರಿದ್ದರು ಕೆ.ಎಸ್.ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ.