ರೇಪ್ ಆರೋಪಿಯ ಅನುಮಾನಾಸ್ಪದ ಸಾವು: ಪಿಎಸ್‌ಐ ಹಾಗೂ ಸಿಬ್ಬಂದಿ ಸಸ್ಪೆಂಡ್

ರೇಪ್ ಆರೋಪಿಯ ಅನುಮಾನಾಸ್ಪದ ಸಾವು: ಪಿಎಸ್‌ಐ ಹಾಗೂ ಸಿಬ್ಬಂದಿ ಸಸ್ಪೆಂಡ್

ವಿಜಯಪುರ: ಜಿಲ್ಲೆಯ ಸಿಂದಗಿಯಲ್ಲಿ ನಡೆದ ಅತ್ಯಾಚಾರದ ಆರೋಪಿ ಪೊಲೀಸ್ ವಶದಲ್ಲಿದ್ದಾಗಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಸಂಗಮೇಶ್ ಹೊಸಮನಿ ಹಾಗೂ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಕಾನ್ಸ್ಟೇಬಲ್ ಗಳಾದ ಎನ್.ಬಿ ನಾದ್, ಗುರುರಾಜ್ ಮಾಶ್ಯಾಳ, ಅನಂತ ಪಾಟೀಲ್, ಪಿ.ಎಲ್ ಪಟ್ಟೇದ್ ಎನ್ನುವವರೇ ಅಮಾನತುಗೊಂಡ ಸಿಬ್ಬಂದಿ.

ಡಾಬಾ ಮಾಲೀಕನಾಗಿದ್ದ ದೇವಿಂದ್ರ ಎಂಬಾತ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಎಂದು ದೂರು ದಾಖಲಾಗಿತ್ತು.