ಸಂಜೆ ಸ್ನೇಹಿತರ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಒಂದು ಕೆ.ಜಿ. ಚಿನ್ನಾಭರಣ ಕಳವು!

ಸಂಜೆ ಸ್ನೇಹಿತರ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಒಂದು ಕೆ.ಜಿ. ಚಿನ್ನಾಭರಣ ಕಳವು!

ಮಂಡ್ಯ: ಕಳ್ಳರು ರಾತ್ರಿ ವೇಳೆ ಅಥವಾ ಮನೆಯವರು ಎಲ್ಲಾದರೂ ದೂರ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ಮಾಡುವುದು ಸರ್ವೇಸಾಮಾನ್ಯ. ಆದರೆ ಇಲ್ಲಿ ಸಂಜೆ ಸ್ನೇಹಿತರ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಗೆ ನುಗಿದ್ದ ಕಳ್ಳರು, ಒಂದು ಕೆ.ಜಿ. ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಇಂದು ಈ ಕಳವು ನಡೆದಿದೆ. ಇಲ್ಲಿನ ಲೋಲಾಕ್ಷಿ ಎಂಬವರು ಸಂಜೆ ವೇಳೆ ಸ್ನೇಹಿತರ ಮನೆಗೆಂದು ಹೋಗಿದ್ದರು. ಆದರೆ ಅಲ್ಲಿಂದ ಅವರು ವಾಪಸ್ ಬರುವಷ್ಟರಲ್ಲಿ ಕಳ್ಳರು ಬೀಗ ಒಡೆದು ಮನೆಗೆ ಹೊಕ್ಕಿದ್ದರು. ಮಾತ್ರವಲ್ಲ, ಬೀರುವಿನಲ್ಲಿದ್ದ ಒಡವೆಗಳನ್ನೂ ದೋಚಿಕೊಂಡು ಹೋಗಿದ್ದರು.

ಸ್ನೇಹಿತರ ಮನೆಯಿಂದ ಮರಳಿದಾಗ ಕಳವು ನಡೆದಿರುವುದು ಗೊತ್ತಾಗಿದ್ದು, ಸ್ಥಳಕ್ಕೆ ಮದ್ದೂರು ಟೌನ್ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಜತೆಗೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡವೂ ಬಂದಿದ್ದು, ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.