ಮುರುಘಾಶ್ರೀಗಳ ಪೀಠತ್ಯಾಗದ ವಿಚಾರ; ಸಿಎಂ ಬೊಮ್ಮಾಯಿ ಸ್ಪಷ್ಟನೆ

ಮುರುಘಾಶ್ರೀಗಳ ಪೀಠತ್ಯಾಗದ ವಿಚಾರ; ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶ್ರೀಗಳ ಪೀಠತ್ಯಾಗಕ್ಕೆ ಒತ್ತಡಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಮಠದ ಭಕ್ತರು, ಆಡಳಿತಾಧಿಕಾರಿಗಳ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಸಮಾಲೋಚನೆ ನಡೆಸಿದೆ.

ಮುರುಘಾಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ವಿಚಾರವಾಗಿ ಮಾತನಡಿದ ಸಿಎಂ ಬೊಮ್ಮಾಯಿ, ಭಕ್ತರು ಹಾಗೂ ಮಠದ ಒಂದು ನಿಯೋಗ ನಿನ್ನೆ ನನ್ನನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಮಠದ ಆಡಳಿತ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಮಠದ ಎಲ್ಲಾ ವಿಚಾರಗಳನ್ನು ವಿವರಿಸಿದ್ದಾರೆ. ಮಠದಲ್ಲಿ ಕಾನೂನು ಪ್ರಕಾರ ಒಂದು ಟ್ರಸ್ಟ್ ಇದೆ. ಹಾಗಾಗಿ ಕಾನೂನು ಪ್ರಕಾರ ಏನೆಲ್ಲ ಅವಕಾಶವಿದೆ ಆ ನಿಟ್ಟಿನಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಕಾನೂನು ಪ್ರಕಾರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.