ಯಲಹಂಕ ಶಾಸಕನ ವಿರುದ್ಧ ಜೀವ ಬೆದರಿಕೆ ಆರೋಪ; ಐಜಿಪಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ದೂರು
ಬೆಂಗಳೂರು: ಯಲಹಂಕ ಶಾಸಕ ಎಸ್ .ಆರ್ ವಿಶ್ವಾನಾಥ್ ವಿರುದ್ಧ ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ಶಾಸಕರ ವಿರುದ್ಧ ದಾಸನಪುರ ಕಾಂಗ್ರೆಸ್ ಬ್ಲಾಕ್‌ನಿಂದ ಐಜಿಪಿಗೆ ದೂರು ಸಲ್ಲಿಸಲಾಗಿದೆ.
ಕಾಂಗ್ರೆಸ್ ಆಕಾಂಕ್ಷಿ ನಾಗರಾಜ್ ಗೌಡರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ಮಾದನಾಯಕನಹಳ್ಳಿ ಪಕ್ಷದ ಕಚೇರಿ ಉದ್ಘಾಟನೆ ವೇಳೆ ನಡೆದ ಭಾಷಣದ ವೇಳೆ ಬೆದರಿಕೆ ಹಾಕುವಂತೆ ವಿಶ್ವನಾಥ್ ಮಾತನಾಡಿದ್ದಾರೆ ಎನ್ನಲಾಗಿದೆ.