ರೋಮ್‌ನಿಂದ ಅಮೃತಸರಕ್ಕೆ ಆಗಮಿಸಿದ 285 ಪ್ರಯಾಣಿಕರ ಪೈಕಿ 170 ಮಂದಿಗೆ ಕೊರೊನಾ ಪಾಸಿಟಿವ್

ಅಮೃತಸರ : ರೋಮ್ʼನಿಂದ ಚಾರ್ಟರ್ ವಿಮಾನದಲ್ಲಿ ಅಮೃತಸರಕ್ಕೆ ಆಗಮಿಸಿದ ಒಟ್ಟು 285 ಪ್ರಯಾಣಿಕರ ಪೈಕಿ 170 ಮಂದಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ.
ಗುರುವಾರ, ಇಟಲಿಯಿಂದ ಅಂತರರಾಷ್ಟ್ರೀಯ ಚಾರ್ಟರ್ಡ್ ವಿಮಾನದ 125 ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕೋವಿಡ್-19ಗೆ ಪಾಸಿಟಿವ್ ಪರೀಕ್ಷೆ ನಡೆಸಿದ್ದರು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಇಟಲಿ 'ಅಪಾಯದಲ್ಲಿರುವ' ದೇಶಗಳಲ್ಲಿ ಒಂದಾಗಿದೆ. ಇನ್ನು ಎಲ್ಲಾ ಪ್ರಯಾಣಿಕರನ್ನ ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 125 ಜನರ ವರದಿ ಗುರುವಾರ ಪಾಸಿಟಿವ್ ಬಂದಿತ್ತು.
ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳು ಕೋವಿಡ್-19 ಹರಡುವುದನ್ನ ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನ ತೆಗೆದುಕೊಂಡಿದ್ದೇವೆ ಎಂದು ಟ್ವಿಟರ್ʼನಲ್ಲಿ ತಿಳಿಸಿದ್ದಾರೆ. ಇನ್ನು ಇಟಲಿಯ ಮಿಲನ್ ಮತ್ತು ಪಂಜಾಬ್ʼನ ಅಮೃತಸರ ನಡುವಿನ ಚಾರ್ಟರ್ ವಿಮಾನವನ್ನ ಪೋರ್ಚುಗೀಸ್ ಕಂಪನಿ ಯುರೋ ಅಟ್ಲಾಂಟಿಕ್ ಏರ್ ವೇಸ್ ನಿರ್ವಹಿಸುತ್ತಿತ್ತು.