ವಿಶಿಷ್ಟ ಚೇತನರಿಗೆ ಸಮಾಜ ಅನುಕಂಪ ತೋರುವ ಬದಲು ಅವಕಾಶ ನೀಡಿ | Bangalore |
ವಿಶಿಷ್ಟ ಚೇತನರಿಗೆ ಸಮಾಜ ಅನುಕಂಪ ತೋರಿಸುವ ಬದಲು ಅವಕಾಶ ನೀಡಬೇಕು ಎಂದು ಸಕ್ಷಮ ಬೆಂಗಳೂರು ಅಧ್ಯಕ್ಷರು ಕಿರಣ ಎಸ್ ಮೂರ್ತಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಕಮ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ದಿವ್ಯಾಂಗರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೂರ್ವ ಜನ್ಮದಲ್ಲಿ ಮಾಡಿದ ಪಾಪ ಕಾರ್ಯಗಳಿಂದ ವಿಶಿಷ್ಟ ಚೇತನರಾಗಿ ಹುಟ್ಟಿದ್ದಾರೆ ಎಂಬ ಮನೋಭಾವದಿಂದ ಅವರನ್ನು ಸಮಾಜದಲ್ಲಿರುವ ಕೆಲವರು ಕೀಳು ದೃಷ್ಟಿಯಿಂದ ನೋಡುವ ಪ್ರವೃತ್ತಿ ಬೆಳೆಸಿಕೊಂಡಿರುವುದು ವಿಷಾದದ ಸಂಗತಿ. ಸಮಾಜ ವಿಶಿಷ್ಟ ಚೇತನರನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದರು.