ಸಿದ್ರಾಮಯ್ಯ, ಡಿಕೆಶಿ ವಿರುದ್ದ ಕಿಡಿಕಾರಿದ ಕೆ.ಎಸ್ ಈಶ್ವರಪ್ಪ
ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯವರು ಶಾಮೀಲಾಗಿದ್ರೆ ದಾಖಲೆಗಳು ಬಿಡುಗಡೆ ಮಾಡಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದರು. ಇಂದು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಯವರು ಯಾರಾದ್ರು ಇದ್ರೆ ಅವರ ಹೆಸರು ಹೇಳಲಿ ಅದನ್ನ ಬಿಟ್ಟು ಬ್ಲಾಕ್ ತಂತ್ರ ಮಾಡುತ್ತಿದ್ದಾರೆ ಎಂದು ಸಿದ್ರಾಮಯ್ಯ ಹಾಗೂ ಡಿಕೆಶಿ ವಿರುದ್ದ ಕಿಡಿಕಾರಿದರು. ಕೇವಲ ಪುಗಸಟ್ಟೆ ಆಪಾದನೆ ಮಾಡುತ್ತ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಆ ಬಗ್ಗೆ ಏನಾದ್ರು ದಾಖಲೆಗಳಿದ್ರೆ ಬಿಡುಗಡೆ ಮಾಡಲಿ ದಾಖಲೆಗಳನ್ನು ಇಟ್ಟುಕೊಂಡು ಏನು ಬೆಂಕಿ ಹಚ್ಚುತ್ತೀರಾ, ಇಂತ ತಂತ್ರಗಾರಿಕೆ ರಾಜ್ಯದ ಜನ ಒಪ್ಪುವುದಿಲ್ಲ ಎಂದರು.