ವರುಣನ ಆರ್ಭಟ; ಜನಜೀವನ ಅಸ್ತವ್ಯಸ್ಥ | Bidar |
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗಡಿಕುಶನೂರ್ ಗ್ರಾಮದಲ್ಲಿ ಸತತ ಮೂರುಗಳ ಕಾಲ ಸುರಿದ ಧಾರಕಾರ ಮಳೆಯಿದಾಗಿ ಗ್ರಾಮೀಣ ಭಾಗದ ಜನ ಹೈರಾಣರಾಗಿದ್ದಾರೆ. ರೈತ ಮಹಿಳೆ ಶಕುಂತಲಾ ಸೊರಳ್ಳಿ ಎಂಬುವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾಮಗ್ರಿಗಳು, ದವಸ-ಧಾನ್ಯಗಳು ನೀರುಪಾಲಾಗಿವೆ. ಬೀದರ್ ನಗರ, ಔರಾದ್, ಭಾಲ್ಕಿ ಸೇರಿದಂತೆ ಹಲವೆಡೆ ಸುರಿದ ಭಾರಿ ಮಳೆಯಿಂದ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿ, ಜನಜೀವನ ಅಸ್ತವ್ಯಸ್ಥಗೊಂಡಿದೆ.