ಕೋಟ್ಯಾಂತರ ಹಣದ ಕಾಮಗಾರಿ ವಿಳಂಬವಾಗುತ್ತಿರುವುದೇಕೆ? | Hirekerur |

ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕಿನ ಕೋಡ ಗ್ರಾಮದಲ್ಲಿನ ಮುಖ್ಯರಸ್ತೆ ಅಗಲೀಕರಣಗೊಳಿಸಿ, ಸಿ. ಡಿ ನಿರ್ಮಾಣ, ಪಕ್ಕಾಗಟಾರ, ವಿದ್ಯುತ್ ಕಂಬ ಹಾಕುವ ಕಾಮಗಾರಿಯಲ್ಲಿ ಎಡವಟ್ಟಾಗಿದೆ. ಎರಡು ವರ್ಷವಾದರೂ 5 ಕೋಟಿ ರೂ. ಕಾಮಗಾರಿ ಮುಗಿಯೋ ಲಕ್ಷಣಗಳೇ ಕಾಣಿಸುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ರಾಜ್ಯಪಾಲರು, ಜನಪ್ರತಿನಿಧಿಗಳಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಕಾಮಗಾರಿ ವಿಳಂಬವಾಗುತ್ತಿರುವುದನ್ನು ಗಮನಿಸಿದ ಕೋಡ ಗ್ರಾಮದ ಜನರ ಹಾಗೂ ಮಾನವ ಹಕ್ಕು ಹಾಗೂ ಭ್ರಷ್ಟಾ ಚಾರ ನಿರ್ಮೂಲನ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದರೂ ಸ್ಥಳಕ್ಕೆ ಬಾರದ ಗುತ್ತಿಗೆದಾರ, ಸಂಬಂಧಪಟ್ಟ ಎಂಜನೀಯರ್ ಮೇಲೆ ಗ್ರಾಮಸ್ಥರು ಗರಂ ಆಗಿದ್ದು, ಕಾಮಗಾರಿ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.