ಗಾಂಧೀಜಿ ನಿಸ್ವಾರ್ಥ ದೇಶ ಸೇವೆ ಭಾರತೀಯರಿಗೆ ಸ್ಪೂರ್ತಿ

ಮೊಳಕಾಲ್ಮೂರು ಪಟ್ಟಣದ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚೈತನ್ಯ ಪಬ್ಲಿಕ್ ಹೈಸ್ಕೂಲ್ ನಲ್ಲಿ ಗಾಂಧಿ ಜಯಂತಿಯನ್ನು ಶಾಲಾ ಮಕ್ಕಳು ಭಕ್ತಿಯಿಂದ ಆಚರಿಸಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಿ ರಘುಪತಿ ರಾಘವ ರಾಜಾರಾಮ್ ಗೀತೆ ಹಾಡುವ ಮೂಲಕ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವನಿತಾ ಗಿರೀಶ್ ಮಾತನಾಡಿ, ಗಾಂಧೀಜಿ ಅವರ ನಿಸ್ವಾರ್ಥ ದೇಶ ಸೇವೆಯು ಭಾರತೀಯರಿಗೆ ಸ್ಪೂರ್ತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಯ, ಚೈತನ್ಯ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಭಾಗ್ಯ, ಶಿಕ್ಷಕರಾದ ಪ್ರಸನ್ನ ಸುರೇಶ್ ರಾಧಿಕಾ ರಾಧಮ್ಮ, ಗೀತಾ, ಅಶೋಕ್ ಅನಿತಾ ಪ್ರಿಯಾಂಕಾ ಅಲಿಮಾ ಸಾಬಿಯ, ಫರ್ಜಾನ ತಾಸಿನ್ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.