ಆಕಾಂಕ್ಷಿಗಳ ಚೆಕ್​ಮೇಟ್​ ಹಾಲಿಗಳಿಗೆ ಕೈತಪ್ಪಲಿದೆಯೇ ಟಿಕೆಟ್?; ಕೆಪಿಸಿಸಿ ಅಧ್ಯಕ್ಷರು ಖಾತ್ರಿ ಕೊಟ್ಟರೂ ಕಾಡಿದೆ ಅನುಮಾನ

ಆಕಾಂಕ್ಷಿಗಳ ಚೆಕ್​ಮೇಟ್​ ಹಾಲಿಗಳಿಗೆ ಕೈತಪ್ಪಲಿದೆಯೇ ಟಿಕೆಟ್?; ಕೆಪಿಸಿಸಿ ಅಧ್ಯಕ್ಷರು ಖಾತ್ರಿ ಕೊಟ್ಟರೂ ಕಾಡಿದೆ ಅನುಮಾನ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ, ಅಧಿಕಾರಕ್ಕೆ ಬರುವುದು ಖಚಿತ ಎಂಬ ಮಾತನ್ನು ಆ ಪಕ್ಷದ ನಾಯಕರು ಪದೇಪದೆ ಬಲವಾಗಿ ಹೇಳಿಕೊಂಡ ಬಂದ ಕಾರಣ ಕೈ ಟಿಕೆಟ್​ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಆಕಾಂಕ್ಷಿಗಳು ಶತಾಯಗತಾಯ ಟಿಕೆಟ್ ಪಡೆದುಕೊಳ್ಳಲು ಪಟ್ಟುಹಾಕುತ್ತಿದ್ದಾರೆ.

ಈ ನಡುವೆ ಹಾಲಿ ಶಾಸಕರಲ್ಲಿ ಹತ್ತಕ್ಕಿಂತ ಹೆಚ್ಚು ಮಂದಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದ್ದು, ಹೀಗಾಗಿ ಅವಕಾಶ ತಪ್ಪಬಹುದೆಂಬ ಲೆಕ್ಕಾಚಾರದಲ್ಲಿ ಹಲವು ಶಾಸಕರು ನಾಯಕರ ಮನೆಯ ಕಂಬ ಸುತ್ತುತ್ತಿದ್ದಾರೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷರ ಭೇಟಿಗೆ ಬಂದಿದ್ದ ಶಾಸಕರೊಬ್ಬರು ಮಾಧ್ಯಮ ಪ್ರತಿನಿಧಿಗಳ ಮುಂದೆ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ.