ಮಹಿಳೆಯ‌ ಬಟ್ಟೆ ಬದಲಾಯಿಸೋ ಕೊಠಡಿಯಲ್ಲಿ ಕ್ಯಾಮರಾ ಫಿಕ್ಸ್; ವಿದ್ಯಾರ್ಥಿ ಅರೆಸ್ಟ್‌

ಮಹಿಳೆಯ‌ ಬಟ್ಟೆ ಬದಲಾಯಿಸೋ ಕೊಠಡಿಯಲ್ಲಿ ಕ್ಯಾಮರಾ ಫಿಕ್ಸ್; ವಿದ್ಯಾರ್ಥಿ ಅರೆಸ್ಟ್‌

ಮಂಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದಲ್ಲಿ ನರ್ಸಿಂಗ್ ವಿದ್ಯಾರ್ಥಿ ಪವನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಗೆ ತಪಾಸಣೆಗೆ ಬಂದವರು ಸ್ಯಾನಿಂಗ್‌ಗೆ ಒಳಗಾಗುವ ಮುನ್ನ ಬಟ್ಟೆ ಬದಲಾಯಿಸಬೇಕಾಗುತ್ತದೆ. ಪವನ್ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಕ್ಯಾಮರಾ ಇಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಹೀಗಾಗಿ ಆತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.