ರೌಡಿಶೀಟರ್‌ ಮನೆಗಳ ಮೇಲೆ ದಾಳಿ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದೇನು ಗೊತ್ತಾ?

ರೌಡಿಶೀಟರ್‌ ಮನೆಗಳ ಮೇಲೆ ದಾಳಿ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ರೌಡಿಶೀಟರ್‌ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ರೌಡಿಸಂನಲ್ಲಿ ಆಯಕ್ಟೀವ್​ ಆಗಿರುವ ​​​​​ನಗರದ ಸುಮಾರು 86 ಮಂದಿಗೆ ಚಳಿ ಬಿಡಿಸಿದ್ದಾರೆ.

ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾತನಾಡಿ, ಕೆಲವು ರೌಡಿಶೀಟರ್​ಗಳು ಬಿಬಿಎಂಪಿ ಚುನಾವಣೆ ತಯಾರಿಯಲ್ಲಿದ್ದರು. ನಗರದಾದ್ಯಂತ ಆಕ್ಟಿವ್ ಇರುವ ರೌಡಿಶೀಟರ್ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದರು.
ನ್ಯಾಯಾಲಯದ ವಾರೆಂಟ್ ಇದ್ದರು ಕೆಲವರು ಕೋರ್ಟ್​ಗೆ ಅಟೆಂಡ್ ಆಗಿರಲಿಲ್ಲ. ಇನ್ನೂ ಕೆಲವರು ಬಿಬಿಎಂಪಿ ಚುನಾವಣೆ ತಯಾರಿಯಲ್ಲಿ ಇದ್ರು. ಕೆಲವರು ತಮ್ಮ ಮನೆಯವರನ್ನ ಚುನಾವಣೆಗೆ ನಿಲ್ಲಿಸೋಕೆ ಸಿದ್ದತೆ ಮಾಡಿದ್ರು. ಕೆಲವರು ಚುನಾವಣೆಗಾಗಿ ಹಣಕಾಸು ವಸೂಲಿ ಮಾಡ್ತಿದ್ದಾರೆ. ಬಿಬಿಎಂಪಿ ಚುನಾವಣೆ ಹಾಗೂ ಸಮಾಜದ ಸ್ವಾಸ್ಥ್ಯ ಸಲುವಾಗಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೆಲವರು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.