ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ: ಪ್ರವಾಸಿ ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ರೀತಿಯಲ್ಲೇ ಜವಾಬು ನೀಡಿದೆ. ವಿಕೆಟ್‌ ನಷ್ಟವಿಲ್ಲದೆ 181 ರನ್‌ ಪೇರಿಸಿ ರಾವಲ್ಪಿಂಡಿ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟ ಮುಗಿಸಿದೆ.

ಮೊದಲ ದಿನದ 75 ಓವರ್‌ಗಳ ಆಟದಲ್ಲಿ 4 ವಿಕೆಟಿಗೆ 506 ರನ್‌ ಪೇರಿಸಿದ್ದ ಇಂಗ್ಲೆಂಡ್‌, ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿ 657ಕ್ಕೆ ಮೊದಲ ಇನ್ನಿಂಗ್ಸ್‌ ಮುಗಿಸಿತು.

ಪಾಕಿಸ್ಥಾನಕ್ಕೆ ಅದ್ದುಲ್‌ ಶಫೀಕ್‌ ಮತ್ತು ಇಮಾಮ್‌ ಉಲ್‌ ಹಕ್‌ ಭರ್ಜರಿ ಆರಂಭ ಒದಗಿಸಿದರು. ಕ್ರಮವಾಗಿ 89 ಹಾಗೂ 90 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.