35 ಪ್ರಯಾಣಿಕರನ್ನು ಬಿಟ್ಟು ಅಮೃತಸರ ಏರ್ಪೋರ್ಟ್‌ನಿಂದ ಆಕಾಶಕ್ಕೆ ಜಿಗಿದ ವಿಮಾನ

35 ಪ್ರಯಾಣಿಕರನ್ನು ಬಿಟ್ಟು ಅಮೃತಸರ ಏರ್ಪೋರ್ಟ್‌ನಿಂದ ಆಕಾಶಕ್ಕೆ ಜಿಗಿದ ವಿಮಾನ

ಸಿಂಗಾಪುರಕ್ಕೆ ಹೋಗುವ ವಿಮಾನವೊಂದು ಅಮೃತಸರ ವಿಮಾನ ನಿಲ್ದಾಣದಲ್ಲಿ 35 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕಿಂತ ಗಂಟೆಗಳ ಮುಂಚಿತವಾಗಿ ಹೊರಟು ಭಾರಿ ಗೊಂದಲವನ್ನು ಉಂಟುಮಾಡಿತು. ಸ್ಕೂಟ್ ಏರ್‌ಲೈನ್ ವಿಮಾನ ರಾತ್ರಿ 7.55 ಕ್ಕೆ ಹೊರಡಬೇಕಿತ್ತು ಆದರೆ ಅದು 3 ಗಂಟೆಗೆ ಟೇಕ್ ಆಫ್ ಆಗಿದೆ.

ವಿಮಾನದ ಸಮಯದಲ್ಲಿ ಬದಲಾವಣೆಯ ಬಗ್ಗೆ ಇ-ಮೇಲ್ ಮೂಲಕ ಪ್ರಯಾಣಿಕರಿಗೆ ತಿಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಇ-ಮೇಲ್ ಪರಿಶೀಲಿಸಿ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರೊಂದಿಗೆ ವಿಮಾನ ಹಾರಿತು ಎಂದು ಅದು ಹೇಳಿದೆ. ಈ ತಿಂಗಳ ಆರಂಭದಲ್ಲಿ, ಗೋ ಫಸ್ಟ್ ವಿಮಾನ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹಾರಿತ್ತು.

ಕಳೆದ ವಾರವಷ್ಟೇ ಬೆಂಗಳೂರಿನಿಂದ ವಿಮಾನವೊಂದು ಟೇಕಾಫ್ ಆಗಿ ತನ್ನ 50 ಪ್ರಯಾಣಿಕರನ್ನು ಬಿಟ್ಟು ಆಕಾಶಕ್ಕೆ ಜಿಗಿದಿತ್ತು. 'ಗೋ ಫಸ್ಟ್‌' ವಿಮಾನ ಸಂಸ್ಥೆಯ ಎಡವಟ್ಟಿನಿಂದ ಈ ಘಟನೆ ನಡೆದಿತ್ತು. ಗೋ ಫಸ್ಟ್‌ ವಿಮಾನಯಾನ ಸಂಸ್ಥೆಯು ನಿರ್ಲಕ್ಷ್ಯ ತೋರಿಸಿದೆ ಎಂದು ಪ್ರಯಾನಿಕರು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ಬೆಂಗಳೂರಿನಿಂದ ದೆಹಲಿಗೆ ಜಿ8 116 ವಿಮಾನವು ಸೋಮವಾರ ಬೆಳಿಗ್ಗೆ 6.30 ರ ಸುಮಾರಿಗೆ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಟೇಕ್ ಆಫ್ ಆಗಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಲಾಗಿದೆ. ಈ ಟ್ವಿಟ್‌ಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಖ್ಯಾತೆಯನ್ನು ಟ್ಯಾಗ್ ಮಾಡಲಾಗಿತ್ತು.