ಶಿಕ್ಷಕರ ಮೃತರ ಕುಟುಂಬಕ್ಕೆ ಸ್ಪಂಧಿಸಿದ ಸರಕಾರ- ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ.

ಧಾರವಾಡ: ಕೋವಿಡ್-೧೯ ಕರ್ತವ್ಯದ ಮೇಲೆ ಅಥವಾ ಕೊವಿಡ್ ಹಾಗೂ ಇತರೆ ಕಾರಣಗಳಿಂದ ನಿಧನರಾದ ಬೋಧಕ ಹಾಗೂ ಬೋಧಕೇತರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಸಂಬAಧಪಟ್ಟ ಉಪನಿರ್ದೇಶಕರು ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕೆಂದು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರುಗಳು ಸುತ್ತೋಲೆಯನ್ನು ಹೊರಡಿಸಿ ತಕ್ಷಣ ಸ್ಪಂಧಿಸಿರುವುದು ಶ್ಲಾöಘನೀಯ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಎಲ್ಲ ಸೌಲಭ್ಯ ಒದಗಿಸಲು ಮನವಿ ಸಲ್ಲಿಸಿದ ೧-೨ ದಿನಗಳಲ್ಲಿಯೇ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ೧೭ನೇ, ಮೇ ೨೦೨೧ ರಂದು ಹಾಗೂ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ೧೮ನೇ, ಮೇ ೨೦೨೧ ರಂದು ಸುತ್ತೋಲೆ ಹೊರಡಿಸಿ ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಎಸ್.ವಿ.ಸಂಕನೂರ ಅವರು ತಿಳಿಸಿದ್ದಾರೆ. ಶಿಕ್ಷಕರ ಸಂಘಟನೆಯವರು ಹಾಗೂ ಸಂಬAಧಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದ್ದಾರೆ.

ಶಿಕ್ಷಕರ ಮೃತರ ಕುಟುಂಬಕ್ಕೆ ಸ್ಪಂಧಿಸಿದ ಸರಕಾರ- ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ.