ಹುಬ್ಬಳ್ಳಿ: ನಗರದ ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂದಿಸಿ ಹಾಗೂ ಪತ್ರಿಕಾ ಹಂಚುವವರಿಗೆ ಮಾಸ್ಕ್, ಸ್ಯಾನಿಟೈಸರ್, ಆಹಾರ ಕಿಟ್ ವಿತರಿಸಲು ವಿತರಕರಾದ ವೀರಣ್ಣ ಮಾರನಾಳ ಮನವಿ ಮಾಡಿದ್ದಾರೆ.
ಇಂದಿನ ದಿನಗಳಲ್ಲಿ ಪತ್ರಿಕಾ ವಿತರಕರಿಗೆ ಲಸಿಕೆಯನ್ನು ಹಾಕುವ ಕೆಲಸವಾಗಿಲ್ಲ, ಬಹಳಷ್ಟು ಪತ್ರಿಕಾ ವಿತರಕರಿಗೆ ಮನೆಯ ಆರ್ಥಿಕ ಪರಿಸ್ಥಿತಿ ಹದಿಗೆಟ್ಟಿದ್ದು ಸರಕಾರವಾಗಲೀ , ಜನಪ್ರತಿನಿ
ಧಿಗಳಾಗಲೀ, ಮುತುವರ್ಜಿ ವಹಿಸಿಲ್ಲವೆಂದು ಬೇಸರ ವ್ಯಕ್ತ ಪಡಿಸಿದರು. ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಶಾಸಕರು, ಜನಪ್ರತಿನಿಧಿಗಳು ಮಾಸ್ಕ್ , ಸ್ಯಾನಿಟೈಸರ್, ಆಹಾರ ಕಿಟ್ ಕೊಟ್ಟಿದ್ದು ಈ ವರ್ಷ ಇನ್ನೂವರೆಗೂ ಯಾರು ಯಾವುದೇ ತರಹದ ಸಹಾಯ ಹಸ್ತವನ್ನು ಮಾಡಿಲ್ಲ ಎಂದು ನೊಂದು ಬೇಸರ ವ್ಯಕ್ತಪಡಿಸಿದ್ದಾರೆ
ಪತ್ರಿಕಾ ವಿತರಕರಿಗೆ ಲಸಿಕೆಯನ್ನು ಕೊಡಲು ಸರಕಾರವು ಚಿಂತನೆ ಮಾಡಬೇಕು, ಜನಪ್ರತಿನಿದಿಗಳು ಇಂದಿಗೂ ನಮ್ಮ ವ್ಯವಸ್ಥೆಯ ಬಗ್ಗೆ ವಿಚಾರಿಸದಿರುವುದು ಆಶ್ಚರ್ಯಕರ ಸಂಗತಿ ಎಂದರು, ಸ್ವತ: ಪತ್ರಿಕಾ ವಿತರಕರಾಗಿ ಶಾಸಕರಾಗಿದ್ದರು ಪತ್ರಿಕಾ ವಿತರಕರಿಗೆ ಕೊರೊನಾ ಎಂಬ ಮಹಾಮಾರಿ ಬಂದಾಗಲೂ ಲಸಿಕೆಯನ್ನು ಕೊಡಿಸುವ ಕಾರ್ಯಕ್ಕೆ ಹೊಗದಿರುವುದು ದುರಂತವೇ ಸರಿ ಎಂದು ಮಾರನಾಳ ದು:ಖದಿಂದ ನುಡಿದಿದ್ದಾರೆ. ಪತ್ರಿಕಾ ವಿತರಕರಿಗೆ ಸರಕಾರದಿಂದ ಬಜೆಟ್‌ನಲ್ಲಿ ಮಾತ್ರ ಘೋಷಣೆಯಾಗುವ ಬದಲು, ಸರಕಾರವು ಬಜೆಟ್ ಘೋಷಣೆಯಾದ ಬಗ್ಗೆ ಕಾರ್ಯ ರೂಪದಲ್ಲಿ ಲಸಿಕೆಯು ಕೊಡುವ ಕಾರ್ಯವಾಗಲಿ ಎಂದು ವಿತರಕರು ಮನವಿ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯವರು ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂದಿಸದಿರುವುದು ತುಂಬಾ ನೋವಿನ ಸಂಗತಿ. ಆದಷ್ಟೂ ತುರ್ತಾಗಿ ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂದಿಸಿ, ಅವರ ಸಮಸ್ಯೆಯನ್ನು ಬಗೆಹರಿಸಿಲು ಮನವಿ ಮಾಡಿದ್ದಾರೆ,