ಯಂತ್ರ ಸಂಶೋಧನೆ, ಚಿಕ್ಕ ಮಕ್ಕಳಿಗಾಗಿ ಈ ಸಂಶೋಧನಾ.....ಚಿಕ್ಕ ಮಕ್ಕಳಲ್ಲಿ

ಧಾರವಾಡ.

 ಸೆರೆಬ್ರಲ್ ಪಾಲ್ಸಿ  ರೋಗ ಪತ್ತೆ ಹಚ್ಚೋದು ತುಂಬಾನೇ ಕಷ್ಟಕರ.....

ರೋಗ ಪತ್ತೆ ಹಚ್ಚೋದು ತುಂಬಾನೇ ಕಷ್ಟಕರ

 ಚಿಕ್ಕ ಮಕ್ಕಳಲ್ಲಿ ಸೆರೆಬ್ರಲ್ ಪಾಲ್ಸಿ ಅನ್ನೋ ರೋಗ ಪತ್ತೆ ಹಚ್ಚೋದು ತುಂಬಾನೇ ಕಷ್ಟಕರ. ಈ ರೋಗವನ್ನು ವೈದ್ಯರು ಭೌತಿಕವಾಗಿ ಪರೀಕ್ಷೆ ನಡೆಸಿ ತೀರ್ಮಾನಕ್ಕೆ ಬರುತ್ತಾರೆ. ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಈ ರೋಗವನ್ನು ಸುಲಭವಾಗಿ ಪತ್ತೆ ಹೆಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲು ನೂತನ ಯಂತ್ರವೊಂದನ್ನು ಶೋಧಿಸಿದ್ದಾರೆ. ಹೇಗಿದೆ ಆ ಯಂತ್ರ ಇಲ್ಲಿದೆ ನೋಡಿ...

 ಚಿಕ್ಕಮಕ್ಕಳಲ್ಲಿ ಕಂಡು ಬರುವ ಸೆರೆಬ್ರಲ್ ಪಾಲ್ಸಿ ಅನ್ನುವ ರೋಗ ಪೋಷಕರನ್ನು ಸಾಕಷ್ಟು ಕಂಗೆಡಿಸುತ್ತದೆ. ಇನ್ನು ಈ ರೋಗದಿಂದ ಬಳಲೋ ಮಕ್ಕಳಿಗೆ ದೈಹಿಕ ವ್ಯಾಯಾಮ ಮಾಡಿಸೋದಂತೂ ದೊಡ್ಡ ಕಷ್ಟದ ಕೆಲಸ‌. ಈ ಕೆಲಸವನ್ನು ಸರಳವಾಗಿ ಮಾಡಲು ಧಾರವಾಡದ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಸತೀಶ ಭೈರಣ್ಣವರ್ ಹೊಸ ಯಂತ್ರವೊಂದನ್ನು ಸಂಶೋಧಿಸಿದ್ದಾರೆ. ಮಕ್ಕಳ ಜನನದ ಸಮಯದಲ್ಲಿ ಹಲವು ಕಾರಣಗಳಿಂದ ವಿಕಲಚೇತನ ಅಥವಾ ಬುದ್ದಿ ಬೆಳವಣಿಗೆ ಆಗದೇ ಇರುವಂತಹ ಉದಾಹರಣೆಗಳಿರುತ್ತವೆ. ಮಕ್ಕಳು ಬೆಳೆದಂತೆ ನಡೆಯುವಲ್ಲಿ ಅಥವಾ ಇನ್ನಾವುದೇ ಸಂದರ್ಭದಲ್ಲಿ ಅವರ ನಡೆಯುವ ವಿಧಾನ ಸೇರಿದಂತೆ ವರ್ತನೆಗಳಿಂದ ಅವರಲ್ಲಿನ ಲೋಪ ಕಂಡು ಬರುತ್ತದೆ. ಇದನ್ನು ಸೆರೆಬ್ರಲ್ ಪಾಲ್ಸಿ ರೋಗ ಎನ್ನಲಾಗುತ್ತದೆ. ಇಂತಹ ಮಕ್ಕಳಿಗೆ ಬಂದಿರುವ ರೋಗವನ್ನು ವೈದ್ಯರು ಈ ಮೊದಲು ಭೌತಿಕವಾಗಿಯೇ ಪತ್ತೆ ಹಚ್ಚಬೇಕಿತ್ತು. ಇದೀಗ ಎಸ್‌ಡಿಎಂ ಸಂಸ್ಥೆಯಲ್ಲಿರುವ ಕ್ರಾಫ್ಟಿಂಗ್ ಟೆಕ್ನಾಲಜಿಸ್ ತಂಡವು ಟ್ರೆಡ್ ಮಿಲ್ ಆಧಾರಿತ ಫುಟ್ ಪ್ರೆಷರ್ ಅನಲೈಜರ್ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

 ಈ ಯಂತ್ರದ ಮೂಲಕ ಮಕ್ಕಳ ಪಾದದ ಭಂಗಿಯಲ್ಲಿನ ಬದಲಾವಣೆಯನ್ನು ಯಂತ್ರಕ್ಕೆ ಅಳವಡಿಸಲಾದ ಸ್ಕ್ರೀನ್‌ನಲ್ಲಿ ಸ್ಪಷ್ಟವಾಗಿ ಕಾಣಬಹುದು. ಜೊತೆಗೆ ಈ ತಂತ್ರಜ್ಞಾನದ ಮೂಲಕ ಮಕ್ಕಳ ಪಾದದ ಒತ್ತಡದ ದತ್ತಾಂಶವನ್ನು ಸ್ವಯಂ ಚಾಲಿತವಾಗಿ ವೈದ್ಯರಿಗೆ ಕಳುಹಿಸಲಾಗುತ್ತದೆ. ಈ ಆಧಾರದ ಮೇಲೆ ವೈದ್ಯರು ಮುಂದಿನ ಚಿಕಿತ್ಸೆ ಮಾಡಲು ಅನುಕೂಲ. ಈ ಟ್ರೆಡ್ ಮಿಲ್ ಆಧಾರಿತ -ಫುಟ್ ಪ್ರೆಷರ್ ಅನಲೈಜರ್ ನಲ್ಲಿ ಮಕ್ಕಳು ವಾಕಿಂಗ್ ಮಾಡುವಾಗ ಬೇಸರ ಬರಬಾರದೆಂದು ಸ್ಕೀನ್ ಮೇಲೆ ಆಟಗಳನ್ನು ಕೂಡ ಅಳವಡಿಸಲಾಗಿದೆ. 

 ಯಂತ್ರದ ಉತ್ಪಾದನೆಗೆ 60 ಸಾವಿರ ರೂಪಾಯಿ ವೆಚ್ಚವಾಗಲಿದೆ. ಮನೆಯಲ್ಲಿ ಅದಾಗಲೇ ಟ್ರೆಡ್ ಮಿಲ್ ಇದ್ದರೆ, ಅದಕ್ಕೆ ಈ ಯಂತ್ರವನ್ನು ಅಳವಡಿಸದರೆ, ಕೇವಲ 25 ಸಾವಿರದಷ್ಟು ಮಾತ್ರ ಖರ್ಚಾಗಲಿದೆ. ಇದೀಗ ಈ ಸಂಶೋಧನೆಗೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಈ ಯಂತ್ರದಿಂದ ರೋಗಿಗಳ ಪೋಷಕರ ಜೊತೆಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಸಾಕಷ್ಟು ಅನುಕೂಲವಾಗೋದಂತೂ ಸತ್ಯ.

ಉಮೇಶ ಬಾಡದ 9live ಧಾರವಾಡ.