ಕರಾಟೆ; ಏಳು ವಿದ್ಯಾಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಅಣ್ಣಿಗೇರಿ

ಧಾರವಾಡ ಜಿಲ್ಲೆಯ ಅಣಿಗೇರಿ ಪಟ್ಟಣದ ಅಣ್ಣಿಗೇರಿ ಗೋಲ್ಡನ್ ಕರಾಟೆ ಕ್ಲಬ್‍ನ ಏಳು ಜನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಅಣ್ಣಿಗೇರಿ ಪಟ್ಟಣಕ್ಕೆ ಸೇರಿದಂತೆ ಜಿಲ್ಲೆಗೆ ಹೆಸರು ತಂದಿದ್ದಾರೆ. ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಗದಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 18 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನ ಭರತ ಹೂಗಾರ, ಅಜಯ್ ಹನಿಸಿ, ಪ್ರಜ್ವಲ್ ಗುಲಗಂಜಿ, ಸಾನಿಯಾ,  ದ್ವಿತೀಯ ಸ್ಥಾನ ಹರ್ಷಿತಾ ಬಾಕಳೆ, ಶ್ರೀ ಮಂದಾರ ಹನುಮಕ್ಕನವರ್, ತೃತೀಯ ಸ್ಥಾನ ತೇಜಸ್ವಿನಿ ಹಿರೇಮಠ್ ಪಡೆದಿದ್ದಾರೆ. ಇವರಿಗೆ ತಾಲೂಕು ಸೇರಿದ ಜಿಲ್ಲೆಯಾದ್ಯಂತ ಅನೇಕ ಸಂಘ-ಸಂಸ್ಥೆಗಳು ನಗರದ ಗುರುಹಿರಿಯರು ಹಾಗೂ ಗೋಲ್ಡನ್ ಕರಾಟೆ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ್ ನಾವಳ್ಳಿ, ಉಪಾಧ್ಯಕ್ಷರಾದ ಪ್ರೇಮನಾಥ್ ಬಾಕಳೆ, ಗೌರವಾಧ್ಯಕ್ಷರಾದ ಲಕ್ಷ್ಮಣ್ ನಾಯಕರ, ಮತ್ತು ಮುಖ್ಯ ತರಬೇತುದಾರರಾದ ಗಣೇಶ್ ಇಳಕಲ್ ಸೇರಿದಂತೆ ಕರಾಟೆ ಕ್ಲಿಕ್ ವಿದ್ಯಾರ್ಥಿಗಳು ಮತ್ತು ಪಾಲಕರು ಶುಭ ಹಾರೈಸಿದ್ದಾರೆ.