ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಮಿಂಚಲಿವೆ 150ಕ್ಕೂ ಅಧಿಕ ಕಲ್ಲಡ್ಕ ಗೊಂಬೆಗಳು

ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಡಿ.21 ರಿಂದ ಆರಂಭಗೊಳ್ಳಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ 50 ಬೃಹತ್ ತಟ್ಟಿರಾಯ (ಬೇತಾಳ) ಗಳೂ ಸೇರಿದಂತೆ 150ಕ್ಕೂ ಅಧಿಕ ಗೊಂಬೆಗಳು ಮಿಂಚಲಿವೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ರೂವಾರಿ ರಮೇಶ್ ಕಲ್ಲಡ್ಕ ಸುಮಾರು 10ರಿಂದ 13 ಅಡಿಯ ತಟ್ಟಿರಾಯನ ಗೊಂಬೆಗಳು, ಕೀಲು ಕುದುರೆಗಳು, ಸಣ್ಣ ಗೊಂಬೆಗಳು, ಕರಗ, ಜೋಕರ್, ಕಾರ್ಟೂನ್ ಗೊಂಬೆಗಳು ಸೇರಿದಂತೆ ಹಲವು ಕಲಾಕೃತಿಗಳನ್ನು