ಟಿವಿ ಚಾನೆಲ್‌ಗ‌ಳಲ್ಲಿ 30 ನಿಮಿಷ ರಾಷ್ಟ್ರ ಹಿತದ ಕಾರ್ಯಕ್ರಮ ಪ್ರಸಾರ ಕಡ್ಡಾಯ

ಟಿವಿ ಚಾನೆಲ್‌ಗ‌ಳಲ್ಲಿ 30 ನಿಮಿಷ ರಾಷ್ಟ್ರ ಹಿತದ ಕಾರ್ಯಕ್ರಮ ಪ್ರಸಾರ ಕಡ್ಡಾಯ

ವದೆಹಲಿ: ದೇಶವನ್ನು ಟಿವಿ ಚಾನೆಲ್‌ಗ‌ಳ ಅಪ್‌ಲಿಂಕಿಂಗ್‌ ಹಬ್‌ ಆಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಪ್ರತಿದಿನವೂ ಮೂವತ್ತು ನಿಮಿಷಗಳ ಕಾಲ ರಾಷ್ಟ್ರೀಯ ಮತ್ತು ಸಾಮಾಜಿಕ ಹಿತಾಸಕ್ತಿಯ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಅದರಲ್ಲಿ ಪ್ರಸ್ತಾಪಿಸಲಾಗಿದೆ.

ಜತೆಗೆ ಭಕ್ತಿಯ ಅಂಶಕ್ಕೆ ಹೆಚ್ಚಿನ ಉತ್ತೇಜನ ನೀಡುವಂಥ ಹೊಸ ಚಾನೆಲ್‌ಗ‌ಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ಅವುಗಳ ಸಿಗ್ನಲ್‌ ಅಪ್‌ಲಿಂಕ್‌ ಮತ್ತು ನೇರ ಪ್ರಸಾರಕ್ಕೆ ಉಚಿತ ಅವಕಾಶ ಕಲ್ಪಿಸಿಕೊಡಲಾಗಿದೆ.

ಸಾಮಾಜಿಕ ಹಿತಾಸಕ್ತಿಯ ವ್ಯಾಪ್ತಿಗೆ ಶಿಕ್ಷಣ, ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಹಲವು ಅಂಶಗಳನ್ನು ಹೆಸರಿಸಲಾಗಿದೆ. ಇದರ ಜತೆಗೆ ನೇರ ಪ್ರಸಾರಕ್ಕೆ ಪೂರ್ವಾನುಮತಿ ಪಡೆಯಬೇಕಾಗಿಲ್ಲ ಎಂದು ಸೂಚಿಸಲಾಗಿದೆ.

ಸದ್ಯ ದೇಶದಿಂದ 30 ಚಾನೆಲ್‌ಗ‌ಳಿಗೆ ಮಾತ್ರ ಅಪ್‌ಲಿಂಕ್‌ ಸೌಲಭ್ಯ ಹೊಂದಿದೆ. ಉಳಿದ 897 ಚಾನೆಲ್‌ಗ‌ಳು ಇತರ ದೇಶಗಳಿಂದ ಕಾರ್ಯಕ್ರಮ ಅಪ್‌ಲಿಂಕ್‌ ಮಾಡುತ್ತಿವೆ.

ಕೇಂದ್ರ ಸರ್ಕಾರದ ನಿರ್ಧಾರದಿಂದ ಭೂತಾನ್‌, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದ ಚಾನೆಲ್‌ಗ‌ಳಿಗೆ ಭಾರತದಿಂದಲೇ ಅಪ್‌ಲಿಂಕಿಂಗ್‌ ವ್ಯವಸ್ಥೆ ಹೊಂದಲೂ ಸಾಧ್ಯವಾಗಲಿದೆ.