ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಭೀತಿ; ಹೋಟೆಲ್‌ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯಕ್ಕೆ ನಿರ್ಧಾರ

ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಭೀತಿ; ಹೋಟೆಲ್‌ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯಕ್ಕೆ ನಿರ್ಧಾರ

ಬೆಂಗಳೂರು: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ನಗರದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.

ಕೊರೊನಾ ಅಬ್ಬರದಿಂದ ಬೆಂಗಳೂರಿನಲ್ಲಿ ಫುಲ್‌ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿ ಹೋಟೆಲ್‌ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಮಾಸ್ಕ್‌ ಕಡ್ಡಾಯ ಮಾಡಲು ಹೋಟೆಲ್‌ ಮಾಲೀಕರ ಸಂಘ ನಿರ್ಧಾರಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಮಾಸ್ಕ್‌ ಆಟೋ ಮತ್ತು ಕ್ಯಾಬ್‌ ಚಾಲಕರು ಧರಿಸಿದ್ದಾರೆ.

ಇನ್ನು ಕೊರೊನಾ ಬಗ್ಗೆ ಮಾರ್ಷಲ್‌ ಗಳು ಜಾಗೃತಿಗೆ ಮುಂದಾಗಿದ್ದಾರೆ. ಮಾಸ್ಕ್‌ ಮತ್ತು ದೈಹಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾರ್ಷಲ್ಸ್‌ ಗಳಿಂದ ಅನೌನ್ಸ್‌ ಮಾಡಿದ್ದಾರೆ. ನಗರ ಯಶವಂತಪುರ ಸೇರಿ ಹಲವು ಕಡೆ ಕೋವಿಡ್‌ ಜಾಗೃತಿ ವಹಿಸಲಾಗಿದೆ.ನಗರದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಬಿಎಂಟಿಸಿ ಬಸ್‌ ಹಾಗೂ ಮೆಟ್ರೋದಲ್ಲೂ ಸಹ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಇಂದೇ ವೇಳೆ ಮಾಸ್ಕ್ ಇಲ್ಲವೆಂದರೆ ಪ್ರಯಾಣಿಕರಿಗೆ ಅವಕಾಶ ನೀಡುತ್ತಿಲ್ಲ. ಇದೀಗ ನಮ್ಮ ಮೆಟ್ರೋದಲ್ಲಿ ಕೊವಿಡ್‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಮಾಸ್ಕ್‌ ಇಲ್ಲವೆಂದರೆ ನಮ್ಮ ಮೆಟ್ರೋದಲ್ಲಿ ಒಳಗೆ ಪ್ರವೇಶ ಮಾಡುವಂತಿಲ್ಲ ಎಂದು ಕ್ರಮ ಕೈಗೊಂಡಿದ್ದಾರೆ.