ಆಪರೇಷನ್ ಕಮಲ ನ್ಯಾಚುರಲ್ : ಅಶ್ವಥ್ ನಾರಾಯಣ

ಆಪರೇಷನ್ ಕಮಲ ನ್ಯಾಚುರಲ್ : ಅಶ್ವಥ್ ನಾರಾಯಣ

ಹುಬ್ಬಳ್ಳಿ : ಆಪರೇಷನ್ ಕಮಲ ನೈಸರ್ಗಿಕವಾದ ಪ್ರಕ್ರಿಯೆ. ಚುನಾವಣೆ ಹತ್ತಿರ ಬಂದ ಹಾಗೇ ಬಿಜೆಪಿಯತ್ತ ಇತರ ಪಕ್ಷದವರು ಹರಿದುಬರಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಪ್ರಸ್ತುತವಾದ, ಜನಪರವಾದ, ಜನರ ಪಕ್ಷವಾಗಿದೆ.  ಬೇರೆ ಪಕ್ಷಗಳು ಕೇವಲ ಕುಟುಂಬಕ್ಕೆ ಸೀಮಿತವಾಗಿವೆ. ಅಂತಹ ಪಕ್ಷದಲ್ಲಿ ಯಾರು ಇರಲು ಬಯಸುವುದಿಲ್ಲ. ಬಿಜೆಪಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಸ್ಥಾನಮಾನ ಸಿಗಲಿದೆ. ಬೇರೆ ಪಕ್ಷಗಳಿಂದ ಬರುವವರಿಗೆ ಸ್ವಾಗತ ಇದೆ ಎಂದು ಹೇಳುವ ಮೂಲಕ ಅಶ್ವಥ್ ನಾರಾಯಣ ಪರೋಕ್ಷವಾಗಿ ಆಪರೇಷನ್ ಕಮಲದ ಸೂಚನೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪಠ್ಯದಲ್ಲಿ ಬದಲಾವಣೆ ಮಾಡಬೇಡಿ ಎಂದು ಆ ರೀತಿ ಖಡಾಖಂಡಿತವಾಗಿ ಹೇಳುವುದಲ್ಲ. ಆದರೆ ಎಲ್ಲರ ಭಾವನೆ, ಸಲಹೆಗಳನ್ನು ಪಡೆದು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದನ್ನು ನಮ್ಮ ಸರ್ಕಾರ ಮಾಡಲಿದೆ. ಹಾಗಾಗಿ ಯಾರ ಭಾವನೆಗಳಿಗೆ ದಕ್ಕೆ ಬರದ ರೀತಿಯಲ್ಲಿ ಕೆಲಸವನ್ನು ಮಾಡಲಾಗುವುದು ಆ ಪ್ರಯತ್ನ ನಡೆದಿದೆ. ಈಗಾಗಲೇ ಮುಖ್ಯಮಂತ್ರಿಗಳು ಪಠ್ಯಪುಸ್ತಕ ಕುರಿತಂತೆ ಸ್ಪಷ್ಟವಾಗಿ ತಮ್ಮ ವಿಚಾರಗಳನ್ನು ತಿಳಿಸಿ ಅಗತ್ಯ ಕ್ರಮ ಕ್ರಮವಹಿಸಿದ್ದಾರೆ ಎಂದರು. 

9 ಲೈವ್ ನ್ಯೂಸ್ ಹುಬ್ಬಳ್ಳಿ