ಜೈನಮುನಿಗಳ ಕೇಶಲೋಚನ ಕಾರ್ಯಕ್ರಮ, ಸಾವಿರಾರು ಭಕ್ತರು ಭಾಗಿ

ಮಂತ್ರ ಪಠಣ ಭಕ್ತರ ಪ್ರಾರ್ಥನೆಯ ನಡುವೆ ಶಿಷ್ಯರ ಜೊತೆಗೂಡಿ, ಜೈನಮುನಿಗಳು ಕೇಶಲೋಚನ ಕಾರ್ಯಕ್ರಮ ನಡೆಸಿದ್ರು. ನೆರದ ಸಾವಿರಾರು ಜನರು ಮುನಿಗಳ ವೃತ್ತಾ ಕಂಡು ಆಶ್ಚರ್ಯಗೊಂಡ ಭಕ್ತಾದಿಗಳು. ಹೌದು ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರ ಪುಷ್ಪ ವರ್ಷಾಯೋಗ, ಕೇಶಲೋಚನ ಕಾರ್ಯಕ್ರಮ ನಡೆಯಿತು. ಕೊಟಬಾಗಿ ಗ್ರಾಮದ ಭಕ್ತ ಸಮೂಹಕ್ಕೆ ಮುನಿ ಮಹಾರಾಜರೊಬ್ಬರ ಕೇಶಲೋಚನವನ್ನು ಮೊಟ್ಟಮೊದಲ ಬಾರಿಗೆ ನೋಡುವ ಅವಕಾಶ ಸಿಕ್ಕಿದ್ದು ಭಕ್ತಿದಿಗಳ ಅದೃಷ್ಟವಾಗಿದೆ. ಇನ್ನು ನೆರೆದಿದ್ದ ಭಕ್ತಾದಿಗಳು ಮುನಿಗಳ ಪಾದಪೂಜೆ ಮಾಡಿ ಪುಷ್ಪಾರ್ಚನೆ ಮಾಡುವುದ ಜೊತೆಗೆ ಮುನಿಗಳ ದರ್ಶನ ಪಡೆದುಕೊಂಡರು...