ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ವಿರೋಧಿಸಿ, ಪ್ರತಿಭಟನೆ
ಕುಡಿಯುವ ನೀರು ಮಾರಾಟದ ವಸ್ತುವಲ್ಲ, "ಕುಡಿಯುವ ನೀರಿಗೆ ಮೀಟರ್ ಅಳವಡಿಕೆಯನ್ನು ಖಂಡಿಸಿ, ಧಾರವಾಡ ತಾಲೂಕಿನ ತೆಗೂರು ಗ್ರಾಮ ಪಂಚಾಯಿತಿ ಎದುರು ಆರ್ ಕೆ ಎಸ್ ಸಂಘಟನೆಕಾರರು ಪ್ರತಿಭಟನೆ ನಡೆಸಿದ್ರು. ತೆಗೂರ ಪಂಚಾಯತಿ ಮುಂದೆ ನೂರಾರು ರೈತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ದೇಶದ ಜನತೆಯ ಆರ್ಥಿಕ ಪರಿಸ್ಥಿತಿ ಕುಗ್ಗಿರುವಾಗ ನಮ್ಮನ್ನಾಳುವ ಸರ್ಕಾರಗಳು ಜನತೆಯ ಒಳಿತಿಗಾಗಿ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವುದು ಬಿಟ್ಟು, ಇಂದಿನ ಬಿಜೆಪಿ ಕೇಂದ್ರ ಸರ್ಕಾರ ಮೇಲಿಂದ ಮೇಲೆ ತೆರಿಗೆ ಏರಿಸಿರುವುದು, ಬೆಲೆ ಏರಿಕೆ ಮಾಡುತ್ತಿರುವುದು ಜನ ವಿರೋಧಿ ದೋರಣೆಯಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಡಗಿದರು.