ಚಾಮರಾಜ ನಗರ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ
ಗಡಿ ಜಿಲ್ಲೆ ಚಾಮರಾಜನಗರದ ಉಡಿಗಾಲ ಹೋಬಳಿ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಂದೆ ರೈತರು, ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೋಬಳಿ ವ್ಯಾಪ್ತಿಯಲ್ಲಿರುವ ಜಮೀನುಗಳಲ್ಲಿರುವ ಪಂಪ್ ಸೆಟ್ಟುಗಳಿಗೆ ಸಮರ್ಪಕವಾದ ವಿದ್ಯುತ್ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ತೋಟದ ಮನೆಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಕಾರಣ ಅಲ್ಲಿರುವ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ತುಂಬಾ ತೊಂದರೆಯಾಗಿದೆ. ಕೃಷಿಗಲ್ಲದಿದ್ದರೂ ಅಲ್ಲಿ ವಾಸವಿರುವ ಮನೆಗಳಿಗಾದ್ರೂ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಈ ಭಾಗದಲ್ಲಿ ಕಾಡು ಪ್ರಾಣಿಗಳಾದ ಹುಲಿ ಚಿರತೆಗಳು ಓಡಾಡುತ್ತಲಿದ್ದು, ಸಿಂಗಲ್ ಫೇಜ್ ವಿದ್ಯುತ್ ಇದ್ದರೆ ಯಾವ ಕಾಡು ಪ್ರಾಣಿಗಳು ಸುಳಿಯುವುದಿಲ್ಲ. ಈಗಾಗಲೇ ಸುತ್ತ ಮುತ್ತಲ ವ್ಯಾಪ್ತಿಯಲ್ಲಿನ ಹೋಬಳಿಗಳಲ್ಲಿ ಸಿಂಗಲ್ ಪೀಜ್ ವಿದ್ಯುತ್ ಸಂಪರ್ಕ ಇದ್ದು, ಉಡಿಗಾಲ ಹೋಬಳಿಗೂ ಇದೇರೀತಿ ವಿದ್ಯುತ್ ನೀಡಬೇಕು. ಇಲ್ಲದುದ್ದಲ್ಲಿ ಮುಂದಿನ ದಿನಗಳಲ್ಲಿ ಉಘ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಲಾಗುವುದೆಂದು ರೈತರು ಎಚ್ಚರಿಸಿದ್ರು.