ಜೇಮ್ಸ್‌ ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

ಜೇಮ್ಸ್‌ ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ಕೊನೆಯ ಚಿತ್ರ “ಜೇಮ್ಸ್‌’ನ ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ ಕೆಲ ದಿನಗಳಿಂದ ಪುನೀತ್‌ ರಾಜಕುಮಾರ್‌ ಅನುಪಸ್ಥಿತಿಯಲ್ಲಿಯೇ “ಜೇಮ್ಸ್‌’ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ, ಅಂತಿಮವಾಗಿ ಯೋಜನೆಯಂತೆಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣವನ್ನುಪೂರ್ಣಗೊಳಿಸಿದೆ.

ಇನ್ನು “ಜೇಮ್ಸ್‌’ ಅಂತಿಮ ಚಿತ್ರೀಕರಣದ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜಕುಮಾರ್‌ ಮತ್ತು ಶಿವರಾಜ್‌ ಕುಮಾರ್‌ ಹಾಜರಿದ್ದರು.

ಮೂಲಗಳ ಪ್ರಕಾರ, “ಜೇಮ್ಸ್‌’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದರೂ, ಚಿತ್ರದ ಕೆಲ ಸಣ್ಣಪುಟ್ಟ ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿಯಿತ್ತು. ಇದೀಗ ಅಂದುಕೊಂಡಂತೆ ಚಿತ್ರೀಕರಣ ಸಂಪೂರ್ಣವಾಗಿದೆ.

ಸದ್ಯ “ಜೇಮ್ಸ್’ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ನೀಡಿದೆ. ಜನವರಿ 26ಕ್ಕೆ ಗಣರಾಜ್ಯೋತ್ಸವ ದಿನದಂದು “ಜೇಮ್ಸ್’ ಚಿತ್ರದ ಹೊಸ ಪೋಸ್ಟರ್‌ ರಿಲೀಸ್‌ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದ್ದು, ಅಪ್ಪು ಅಭಿಮಾನಿಗಳಿಗೆ ವಿಶೇಷವಾದ ಗಿಫ್ಟ್ ಪೋಸ್ಟರ್‌ ಕೊಡುವ ಯೋಚನೆಯಲ್ಲಿದೆ. ಫೆ

ಬ್ರವರಿ ತಿಂಗಳಿನಲ್ಲಿ “ಜೇಮ್ಸ್‌’ ಚಿತ್ರದ ಟೀಸರ್‌ ಮತ್ತು ಟ್ರೇಲರ್‌ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಇದೇಮಾರ್ಚ್‌ 17ರಂದು ಪುನೀತ್‌ ರಾಜಕುಮಾರ್‌ ಅವರಹುಟ್ಟುಹಬ್ಬವಿದ್ದು, ಅಂದೇ ಚಿತ್ರವನ್ನು ರಿಲೀಸ್‌ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅಪ್ಪು ಫ್ಯಾನ್ಸ್‌.

ಇನ್ನು “ಜೇಮ್ಸ್‌’ ಚಿತ್ರೀಕರಣ ಮುಗಿದಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.

ರಾಘಣ್ಣ- ಶಿವಣ್ಣ ನಟನೆ :“ಜೇಮ್ಸ್‌’ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಿನಿಮಾ. ಸಹಜವಾಗಿಯೇ ಅಭಿಮಾನಿಗಳಿಂದ ಹಿಡಿದು ಅವರ ಕುಟುಂಬ ವರ್ಗಕ್ಕೆ ಇದು ಅಪ್ಪು ಅವರ ಕೊನೆಯ ಸಿನಿಮಾ ಎಂಬುದನ್ನು ನೆನೆಸಿಕೊಂಡರೆ ಹೃದಯ ಭಾರವಾಗುತ್ತದೆ.ಈಗ ಅಪ್ಪು ಅವರ ಕೊನೆಯ ಸಿನಿಮಾದಲ್ಲಿಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರರಾಜ್‌ಕುಮಾರ್‌ ನಟಿಸಿದ್ದಾರೆ. ಮೂವರು ಅಣ್ಣತಮ್ಮಂದಿರು ಒಂದೇ ಚಿತ್ರದಲ್ಲಿ ನಟಿಸಬೇಕೆಂಬಆಲೋಚನೆ ಇತ್ತು. ಆದರೆ, ಅದು ಕೂಡಿಬರಲಿಲ್ಲ.ಹಾಗಾಗಿ, ಈಗ ಪುನೀತ್‌ ನಟನೆಯ “ಜೇಮ್ಸ್‌’ಸಿನಿಮಾದಲ್ಲಿ ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ನಟಿಸಿದ್ದು,ಒಂದು ವಿಶೇಷವಾದ ಪಾತ್ರ ಮಾಡಿದ್ದಾರೆ. ಈ ಮೂಲಕ “ಜೇಮ್ಸ್‌’ನಲ್ಲಿ ಚಿತ್ರ ಮೂವರು ಒಟ್ಟಾಗಿ ನಟಿಸಿದಂತಾಗಿದೆ.