ಮುಖದ ಮೇಲೆ ಕೂದಲು ಬೆಳೆದ ಕಾರಣಕ್ಕೆ ಡೈವೋರ್ಸ್ ಕೊಟ್ಟ ಪತಿ; ದಾಡಿ ಬಿಟ್ಟು ಮಹಿಳೆ ತಿರುಗೇಟು

ತಮ್ಮ ಮುಖದ ಮೇಲೆ ಹೆಚ್ಚುವರಿ ಕೂದಲಿದ್ದ ಕಾರಣಕ್ಕೇ ತನ್ನನ್ನು ತೊರೆದ ಪತಿಯಿಂದ ದೂರವಾಗಿರುವ ಪಂಜಾಬ್‌ನ ಮಹಿಳೆಯೊಬ್ಬರು ಇದೀಗ ಭಾರೀ ಹೆಮ್ಮೆಯಿಂದ ದಾಡಿ ಬಿಟ್ಟಿದ್ದಾರೆ.
2012ರಲ್ಲಿ ಮದುವೆಯಾದ ವೇಳೆ ಮಂದೀಪ್ ಕೌರ್ ಮುಖದ ಮೇಲೆ ಯಾವುದೇ ಕೂದಲು ಬೆಳೆಯದೇ ಇದ್ದ ಕಾರಣ ಆ ದಿನಗಳಲ್ಲಿ ನೆಮ್ಮದಿಯ ಸಂಸಾರ ನಡೆಸುತ್ತಿದ್ದರು.
ಹತ್ತಿರದ ಗುರುದ್ವಾರಗೆ ತೆರಳುವ ಮೂಲಕ ಭಾವನಾತ್ಮಕ ಹಾಗೂ ನೈತಿಕ ಬಲವನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಕೈ ಹಾಕಿದರು ಮಂದೀಪ್. ಗುರು ಸಾಹಿಬ್‌ರ ಆಶೀರ್ವಾದದಿಂದ ತಮ್ಮ ಜೀವನಪ್ರೀತಿ ಮರಳಿ ಸಿಕ್ಕಿತೆಂದು ಮಂದೀಪ್ ಹೇಳುತ್ತಾರೆ.
ತಮ್ಮ ದೇಹವನ್ನು ಹೇಗಿದೆಯೋ ಹಾಗೇ ಪ್ರೀತಿಸುವ ಇರಾದೆಯಿಂದ ಮುಖದ ಮೇಲಿನ ಕೂದಲನ್ನು ಹಾಗೇ ಬಿಟ್ಟಿರುವ ಮಂದೀಪ್ ಇದೀಗ ಟರ್ಬನ್ ಧರಿಸುತ್ತಾರೆ. ಮೋಟರ್ ಸೈಕಲ್ ಸಹ ಚಲಾಯಿಸುವ ಮಂದೀಪ್ ತಮ್ಮ ಈ ಹೊಸ ಅವತಾರದಲ್ಲಿ ಭಾರೀ ಆತ್ಮವಿಶ್ವಾಸದಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ.