ಹೊರ್ತಿಯಲ್ಲಿ ಬೈಕ್ ಸವಾರ ಅಪಘಾತ

ಕ್ಯಾಂಟರ್ ವಾಹನ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಾದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜೋಡಗುಡಿ ಹತ್ತಿರ ನಡೆದಿದೆ.ಕ್ಯಾಂಟರ್ ವಾಹನ ಚಾಲಕನ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಬಪ್ಪು ರಾಠೋಡ ಹಾಗೂ ಯೋಗಿ ರಾಠೋಡ ಮೃತ ದುರ್ದೈವಿಗಳಾಗಿದ್ದಾರೆ. ಹೊರ್ತಿ ಪೊಲೀಸ ಠಾಣೆಯಯಲ್ಲಿ ಪ್ರಕರಣ ದಾಖಲಿಸಲಾಗಿದೆ.