ಹುಬ್ಬಳ್ಳಿಯ ಐಬಿಮ್ ರ್ ನಲ್ಲಿ ವಿವಿಧ ಸೃಜನಶೀಲ ಕೋರ್ಸ್ಗಳ ಉದ್ಘಾಟನೆ

ಹುಬ್ಬಳ್ಳಿಯ  ಐಬಿಮ್ ರ್ ನಲ್ಲಿ  ವಿವಿಧ ಸೃಜನಶೀಲ ಕೋರ್ಸ್ಗಳ ಉದ್ಘಾಟನೆ

ಶ್ರೀನಂದನ ಸಂಗೀತ ಕಲಾ ಕೇಂದ್ರವು ದ್ರೋಣ ಅಕಾಡೆಮಿಯೊಂದಿಗೆ ಜಂಟಿಯಾಗಿ, ಹುಬ್ಬಳ್ಳಿಯ IBMR group of institution ವಿವಿಧ ಸೃಜನಶೀಲ ಕೋರ್ಸ್ಗಳನ್ನು ಹುಬ್ಬಳ್ಳಿಯ IBMR ಕ್ಯಾಂಪಸ್, ಅಕ್ಷಯ್ ಕಾಲೋನಿ, ನಲ್ಲಿ ದಿನಾಂಕ : 23.02.2022 ರಂದು ಉದ್ಘಾಟನೆ ಮಾಡಿದೆ. ಉದ್ಘಾಟಕರಾಗಿ ಶ್ರೀಮತಿ ಲತಾ ಜಮಖಂಡಿ  ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಿವಾಸ್ ಜೋಶಿ ಸೀತಾರ ವಾದಕರು ಹಾಗೂ ಸಂಯೋಜಕರು, ಅಥಿತಿ ಗಳಾಗಿ ಶ್ರೀಮತಿ ವೀಣಾ ಅಟವಲೆ, ಕಲಾಕಾರರು, ಶ್ರೀ ರಿಯಾಜ್ ಬಸರಿ IBMR executive Director  ಉಪಸ್ಥಿತರಿದ್ದರು. ಶುಭಶ್ರೀ ಪೊಳ್ ಮತ್ತು ನಿಖಿಲ್ ಕಾರ್ಯಕ್ರಮ ನಿರೂಪಣೆ ಮಾಡಿದರು,  ಕುಮಾರಿ ಶ್ರೀಮತಿ ಪೊಳ್ ಸ್ವಾಗತಿಸಿದರು, ಕಲಾ ಕೇಂದ್ರದ ಸಂಚಾಲಕರು ಹಾಗೂ ಅಧ್ಯಕ್ಷರು ಆದ ಶ್ರೀಮತಿ ತಾರಾಮತಿ ಪೊಳ್ ಸಂಸ್ಥೆಯ ಪರಿಚಯ ನೀಡಿ ಪಾರಂಪಾರಿಕವಾಗಿ ಬಂದ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವದು ಈ ಜಂಟಿ ಸಂಸ್ಥೆಯ ಉದ್ದೇಶವಾಗಿರುವದಾಗಿ ಹೇಳಿದರು. ಎಲ್ಲ ಅಥಿತಿಗಳು ಕಲೆಯ ಪ್ರಾಮುಖ್ಯತೆ ಹಾಗೂ ಇಂದಿನ ಪೆಳಿಗೆಗೆ ಸಂಗೀತ, ನೃತ್ಯ ಹಾಗೂ ವಾದನದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.ರಿಯಾಜ್ ಬಸರಿ ಯವರು ಮಾತನಾಡಿ ಇಂದಿನ ಮಕ್ಕಳಲ್ಲಿ ಆಟ, ಪಾಠದ ಜೊತೆಗೆ ವಿವಿಧ ಕಲೆಗಳ ಪರಿಚಯ ಮಕ್ಕಳಲ್ಲಿ ಬೆಳೆಯಲಿ ಅನ್ನುವ ಮಾತನ್ನು ಹೇಳಿದರು, ಹಾಗೂ ಇನ್ನೂ ಮುಂದೆ ಕಲಾಕಾರರ ತಂಡ ನಮ್ಮಲ್ಲಿಯೇ ಇರುವದಾಗಿ ಮಕ್ಕಳು ಇದರ ಪ್ರಯೋಜನ ಪಡೆಯಲು ಹೇಳಿದರು. ಕಲಾ ಕೇಂದ್ರದ ತಂಡದಲ್ಲಿ  ಪ್ರತ್ಯೇಕ ಕಲೆಯ ಶಿಕ್ಷಕರಾಗಿ, ಪ್ರಮೋದ ಉಪಾಧ್ಯಯ ಕರ್ನಾಟಕ ಸಂಗೀತ ಹಾಗೂ ನೃತ್ಯ ರೂಪಕ, ಸಂಧ್ಯಾ ವೈದ್ಯ ಕಥಕ್, ಕೌಶಲ್ಯ ಪೊಳ್ ಭಾರತನಾಟ್ಯ, ಶ್ರೀಕಾಂತ್ ಉಪಾಧ್ಯಯ ತಬಲಾ, ಮನೋಹರ ಕಮ್ಮಾರ ಚಿತ್ರಕಲೆ, ಜಯಕೃಷ್ಣ ಲೋಹಾರ ಗಿಟಾರ್, ಶುಭಶ್ರೀ ಪೊಳ್ ವೆಸ್ಟೆರ್ನ್ dance, ಕವಿತಾ ಸುತಾರ ಸಂಗೀತ, ಶ್ರೀಮತಿ ಪೊಳ್ ಕ್ಯಾಲಿಗ್ರಾಫಿಬರವಣಿಗೆ,ಚಂದ್ರಕಾಂತ ಹುಟಗಿ ಕೊಳಲು, ತಾರಾಮತಿ ಪೊಳ್ ಯೋಗಭ್ಯಾಸ, ಹೀಗೆಹಲವಾರು ಶಿಕ್ಷಕರಿಂದ ಕೂಡಿದ ಸಂಸ್ಥೆ ಉದ್ಘಾಟನೆ ಆಯಿತು ಅತಿಥಿ ಗಳ ಆಶೀರ್ವಾದದ ಮಾತು, ಕೊನೆಯಲ್ಲಿ ಸಂಸ್ಥೆಯ ನಿರ್ದೇಶಕರು ಶ್ರೀ ಚಂದ್ರಕಾಂತ್ ಹುಟಗಿ ಅಭಿನಂದನೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.