ಬೆಂಗಳೂರಲ್ಲಿ ದೇವಿಗೆ ತುಳುನಾಡಿನ ಪಂಜುರ್ಲಿ ದೈವದಂತೆ ಅಲಂಕಾರ: ಭಾರೀ ವಿರೋಧ ವ್ಯಕ್ತ

ಬೆಂಗಳೂರಲ್ಲಿ ದೇವಿಗೆ ತುಳುನಾಡಿನ ಪಂಜುರ್ಲಿ ದೈವದಂತೆ ಅಲಂಕಾರ: ಭಾರೀ ವಿರೋಧ ವ್ಯಕ್ತ

ಬೆಂಗಳೂರು : ಸಿಲಿಕಾನ್‌ ಸಿಟಿಯ ಮಲ್ಲೇಶ್ವರದಲ್ಲಿರುವ ಗಂಗಮ್ಮ ಗುಡಿಯಲ್ಲಿ ದೇವಿಗೆ ತುಳುನಾಡಿನ ದೈವ ಪಂಜುರ್ಲಿಗೆ ಅಲಂಕರಿಸುವಂತೆ ದೇವಿಗೆ ಅಲಂಕಾರ ಮಾಡಿದ್ದು, ಭಾರೀ ವಿರೋಧದ ಜತೆಗೆ ಆಕ್ರೋಶ ವ್ಯಕ್ತಪಡಿಸಲಾಗಿದೆ.

ದೈವಾರಾಧನೆಯೂ ಹಲವು ಪರಂಪರೆ ಹೊಂದಿದೆ.

ಸುಮಾರು ಮೂರು ಶತಮಾನಗಳಿಗಿಂತ ಹಿಂದಿನ ಇತಿಹಾಸವಿರುವ ಕರಾವಳಿಯ ದೈವಾರಾಧನೆಯನ್ನು ಇಂದಿಗೂ ಭಯ ಭಕ್ತಿಯಿಂದ ಪ್ರತಿಯೊಬ್ಬ ಆರಾಧಿಸುತ್ತಾರೆ. ಇದೀಗ ಕಾಂತಾರ ಸಿನಿಮಾದ ಮೂಲಕ ತುಳುನಾಡಿನ ಈ ಸಂಸ್ಕೃತಿ ಇಡೀ ವಿಶ್ವಕ್ಕೆ ತಿಳಿದಿದೆ. ಈ ಬೆನ್ನಲ್ಲೆ ದೈವರಾಧನೆಯಂತೆ ಹಲವೆಡೆ ಆಚರಣೆ ಮುಂದಾಗಿರುವುದು ಬೆಳಕಿಗೆ ಬಂದಿದೆ.

ಅದರಲ್ಲೂ ಬೆಂಗಳೂರಿನಲ್ಲಿ ದೇವಿಗೆ ತುಳುನಾಡಿನ ಪಂಜುರ್ಲಿ ದೈವದಂತೆ ಅಲಂಕಾರ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರೋಶಾನ್ ರೆನೋಲ್ಡ್ ಎಂಬುವವರು ಫೇಸ್‌ಬುಕ್‌ನಲ್ಲಿ (Facebook) ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಕಾಂತಾರ ನಟ ರಿಷಭ್ ಶೆಟ್ಟಿಯನ್ನು ಬೈದುಕೊಂಡಿದ್ದಾರೆ. ಹಣದ ಆಸೆಗಾಗಿ ತುಳುನಾಡಿನ ಆರಾಧನೆ ಆಚರಣೆಯನ್ನು ಎಲ್ಲಿಗೆ ತಲುಪಿಸಿದೆ ಮಾರಾಯ ಎಂದು ಆತ ಬರೆದುಕೊಂಡಿದ್ದಾರೆ.