ಬೆಳಗಾವಿಯಲ್ಲಿ ಇಂದು ಜಾಗೋ ಹಿಂದೂ ಬೃಹತ್‌‌‌‌‌ ಸಮಾವೇಶ

ಬೆಳಗಾವಿಯಲ್ಲಿ ಇಂದು ಜಾಗೋ ಹಿಂದೂ ಬೃಹತ್‌‌‌‌‌ ಸಮಾವೇಶ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಕ್ಷೇತ್ರದಲ್ಲಿ ಹಿಂದೂ ಜಾಗೃತಿ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದ್ದು, ಇಂದು ಜಾಗೋ ಹಿಂದೂ ಬೃಹತ್‌‌‌‌‌ ಸಮಾವೇಶ ನಡೆಯಲಿದೆ. ಯಮನಕರಡಿ ಮತಕ್ಷೇತ್ರದ ಕಡೋಲಿ ಗ್ರಾಮದ ಶಿವಾಜಿ ಹೈಸ್ಕೂಲ್‌‌‌ ಮೈದಾನದಲ್ಲಿ ಜಾಗೋ ಹಿಂದೂ ಬೃಹತ್‌ ಸಮಾವೇಶ ನಡೆಯಲಿದೆ. ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ, ಮಹಾರಾಷ್ಟ್ರದ ಮರಾಠಿ ಭಾಷಿಕ ವಾಗ್ಮಿ ಧನಂಜಯ ಭಾಯಿ ದೇಸಾಯಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.