ಜೀರ್ಣೋದ್ದಾರ ನೆಪ ರಾಮಾಯಣ ಕಥೆ ಹೇಳುವ ಸ್ಮಾರಕಗಳ ಧ್ವಂಸಕ್ಕೆ ಯತ್ನ | Koppal |
ಜೀರ್ಣೋದ್ದಾರ ಮಾಡುವ ನೆಪ ಮಾಡಿಕೊಂಡು ಆನೆಗೊಂದಿಯ ಪಂಪಾಸರೋವರ್ ಬಳಿಯಿರುವ ರಾಮಾಯಣ ಕಥೆ ಹೇಳುವ ಸ್ಮಾರಕಗಳನ್ನು ಬುಲ್ಡೋಜರ್ ಮೂಲಕ ದ್ವಂಸ ಮಾಡಲಾಗುತ್ತಿದೆ. ರಾಮ- ಹನುಮಂತ ಭೇಟಿಯಾದ ಸ್ಥಳ, ಶಬರಿ ಗುಹೆ, ಮಹಾಲಕ್ಷ್ಮಿ ದೇವಾಲಯ, ಪಂಪಾಸರೋವರ್ ಕೂಡ ಕೆಡವಲಾಗುತ್ತಿದೆ. ರಾಜ್ಯದ ಸಚಿವರಾದ ಶ್ರೀರಾಮುಲುರಿಂದ ಸ್ವಂತ ಖರ್ಚಿನಲ್ಲಿ ಜೀರ್ಣೋದ್ದಾರ ಮಾಡಲು ಹೊರಟಿರುವ ಸ್ಮಾರಕಗಳು ಹಂಪಿ ಅಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿವೆ. ಇಲ್ಲಿಯ ಜನ ಶೌಚಾಲಯ ನಿರ್ಮಿಸಲು ಸಹ ಪ್ರಾಧಿಕಾರದಿಂದ ಪರವಾನಿಗೆ ಪಡೆಯಬೇಕು. ಆದರೆ ಇಲ್ಲಿ ಬೃಹತ್ ಯಂತ್ರಗಳ ಬಳಕೆ ಮಾಡಿ ಜೀರ್ಣೋದ್ಧಾರ ಕಾರ್ಯ ಮಾಡುತ್ತಿದ್ದು, ರಾಜ್ಯ ಪುರಾತತ್ವ ಇಲಾಖೆಯಿಂದ ಪರವಾನಿಗೆ ನೀಡಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.