ವಾರಕ್ಕೆ ಎರಡು ಗಂಟೆ ಮಾತ್ರ ಅಂಗನವಾಡಿ ಕೇಂದ್ರ ಓಪನ್; ಹೇಳೋರಿಲ್ಲ, ಕೇಳೋರಿಲ್ಲ | Bidar |
ಗಡಿ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಳಕೆರಾ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಆಡಿದ್ದೆ ಆಟವಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ಇವರು ಪುಟಾಣಿ ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒಳಗೊಂಡಂತೆ ಅನೇಕ ಯೋಜನೆಗಳನ್ನು ತಲುಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ಕೇವಲ ವಾರದಲ್ಲಿ ಎರಡು ಗಂಟೆ ಮಾತ್ರ ಅಂಗನವಾಡಿ ತೆಗೆಯುತ್ತಾರೆ. ಅದು ಮಕ್ಕಳನ್ನು ಸಹಿತ ಕೇಂದ್ರಕ್ಕೆ ಕರೆದುಕೊಂಡು ಬರುವುದಿಲ್ಲ, ಸರ್ಕಾರದಿಂದ ಬಂದ ಪೌಷ್ಟಿಕ ಆಹಾರ ಸಹಿತ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮಕ್ಕಳಿಗೆ ಸರಿಯಾಗಿ ವಿತರಿಸುವುದಿಲ್ಲ ಎಂದು ಗ್ರಾಮದ ಪಾಲಕರಾದ ಚಂದು ನಾರಾಯಣಪೇಟೆ ರಾಜಕುಮಾರ್ ಅವರು ಮಹಿಳಾ ಮತ್ತು ಮಕ್ಕಳ ಇಲಾಖೆ ತಾಲೂಕ ಅಧಿಕಾರಿ ಸಂಪರ್ಕಿಸಿ ಕೂಡಲೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ