ಸ್ಥಳೀಯ ಚುನಾವಣೆಗಳಲ್ಲಿ ಸದಸ್ಯರಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ |Shiggaon|

ಸ್ಥಳೀಯ ಚುನಾವಣೆಗಳಲ್ಲಿ ಸದಸ್ಯರಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ ಈ ಬಿಜೆಪಿ ಸರ್ಕಾರದಿಂದಲೂ ಏನೂ ಸಿಗುತ್ತಿಲ್ಲ ಎಂದು ಎಐಸಿಸಿ ಯೂತ್ ಮಹಿಳಾ ಕಾರ್ಯದರ್ಶಿ ಸ್ವಾತಿ ಮಾಳಗಿ ಹೇಳಿದರು.ಶಿಗ್ಗಾವಿ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೇ. 50ರಷ್ಟು ಮಹಿಳಾ ಸದಸ್ಯರಿರುವ ಸ್ಥಳೀಯ ಚುನಾವಣೆಗಳಲ್ಲಿ ಸರಿಯಾದ ಪ್ರಾಶಸ್ತ್ಯ ಸಿಗಬೇಕಿದೆ ಇಂದು ಮತದಾನ ಮಾಡುತ್ತಿರುವ ಮಹಿಳಾ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡು ಮತದಾನ ಮಾಡುವ ಅವಶ್ಯಕತೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಪಾಟೀಲ್, ವಸಂತಾ ಬಾಗೂರ, ಮಮತಾಜ ಗೋಟಗೋಡಿ, ಕಾಂಜನಾ ಗಾಟಗೆ, ಶಕ್ಕುಬಾಯಿ ಗೊಟಗೋಡಿ, ಮುದ್ದಮ್ಮ ವಡ್ಡರ, ನಸೀರಾಬಾನು ತಿಮ್ಮಾಪೂರ, ಮಹರುನ್ನಿಸಾ ಲಕ್ಷೇಶ್ವರ ಸೇರಿದಂತೆ ಇತರರು ಇದ್ದರು.