ಸುಪ್ರಿಮ ಕೋರ್ಟನಲ್ಲಿ ಅಜರುದ್ದೀನಗೆ ಹೀನಾಯ ಸೋಲು

ಮಾಜಿ ಕ್ರಿಕೇಟಿಗ ಅಜರುದ್ದೀನಗೆ ಸುಪ್ರೀಮ ಕೋರ್ಟನಲ್ಲಿ ಹೀನಾಯ ಸೋಲು ಉಂಟಾಗಿದೆ. ಹೈದರಾಬಾದ ಕ್ರಿಕೇಟ್ ಅಸೋಸಿಯೆಷನ್(ಎಚ್.ಸಿ.ಎ.) ಸ್ಥಾನದಿಂದ ಅಜರುದ್ದೀನ ಕೆಳಗಿಳಿಯಬೇಕಾದ ಪರಿಸ್ಥಿತಿ ಬಂದಿದೆ. ಹೈದರಾಬಾದ ಕ್ರಿಕೆಟ್ ಅಸೋಸಿಯೇಷನ್ ನ ಅಪೆಕ್ಷ ಕೌನ್ಸಿಲ್ ವಿರುದ್ದ ಅಜರುದ್ದೀನ ಪರ ಅರ್ಜಿ ಹಾಕಿದ್ದ ಒಂಬಡ್ಸಮನ್ ದೀಪಕ ವರ್ಮ ಅರ್ಜಿಯನ್ನು ಸುಪ್ರೀಮಕೋರ್ಟ ಇಂದು ವಜಾಗೊಳಿಸಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಅಪೆಕ್ಷ ಕೌನ್ಸಿಲ್ ಅಜರುದ್ದೀನನನ್ನು ಎಚ್.ಸಿ.ಎ ಅಧ್ಯಕ್ಷ ಸ್ಥಾನದಿಂದ ಅಮಾನತ್ತುಗೊಳಿಸಿತ್ತು. ಇದರ ವಿರುದ್ದ ಅಜರುದ್ದೀನ ಓಂಬಡ್ಸಮನ್ ದೀಪಕ ವರ್ಮ ಜೊತೆ ಸೇರಿ ಸುಪ್ರೀಮಕೋರ್ಟಗೆ ಹೋಗಿದ್ದರು. ಆದರೆ, ಈ ಅರ್ಜಿಯನ್ನು ಇಂದು ಸುಪ್ರೀಮಕೋರ್ಟ್ ವಜಾಗೊಳಿಸಿದೆ.ಇದರಿಂದಾಗಿ ಅಜರುದ್ದೀನ ಎಚ್.ಸಿ.ಎ ಸ್ಥಾನದಿಂದ ಕೆಳಗಿಳಿಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಅಜರುದ್ದೀನ ಭಾರಿ ಅವಮಾನ ಎದುರಿಸುವಂತಾಗಿದೆ. ಹಲವಾರು ಅಕ್ರಮಗಳು, ಆರೋಪಗಳ ಹಿನ್ನೆಲೆಯಲ್ಲಿ ಅಪೆಜ್ಷ ಕೌನ್ಸಿಲ್ ಅವರನ್ನು ಎಚ್.ದಿ.ಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು.