ಅಪ್ಪ ನನ್ನನ್ನು ಕ್ಷಮಿಸಿ. ಕ್ಷುಲ್ಲಕ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡ ಯುವತಿ

ವಾರಂಗಲ್: ಉಂಗುರ ಕಳೆದುಕೊಂಡಿದ್ದಕ್ಕೆ ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ಕಳೆದ ಮಂಗಳವಾರ (ಮಾ.28) ನಡೆದಿದೆ.
ಮಾದುಲ ಹೇಮಲತಾ ರೆಡ್ಡಿ (19) ಮೃತ ಯುವತಿ. ಈಕೆ ವಾರಂಗಲ್ನ ಗುನ್ನೆಪಲ್ಲಿ ಗ್ರಾಮದವಳು.
ಹೇಮಲತಾ ಯುಗಾದಿಗೆಂದು ಮನೆಗೆ ಬಂದಿದ್ದಳು. ಈ ವೇಳೆ ಆಕೆ ತಂದೆ ಕೊಡಿಸಿದ ಚಿನ್ನದ ಉಂಗುರವನ್ನು ಕಳೆದುಕೊಂಡಿದ್ದಳು. ಪಾಲಕರು ಬೈತಾರೆ ಎಂಬ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಡೆತ್ನೋಟ್ ಬರೆದಿಟ್ಟು ಹೇಮಲತಾ ಸಾವಿನ ಹಾದಿ ಹಿಡಿದಿದ್ದಾಳೆ. ಕ್ಷುಲಕ ಕಾರಣಕ್ಕೆ ಹೇಮಲತಾ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.
ಮೃತ ಹೇಮಲತಾ ಅವರು ತಂದೆ ಮಾದುಲ ಜಾನಕಿರಾಮುಲು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಸ್ಎಸ್ಐ ಕುಚುಪುಡಿ ಜಗದೀಶ್ ಹೇಳಿದ್ದಾರೆ. (ಏಜೆನ್ಸೀಸ್)