ʼವಾಟ್ಸಾಪ್‌ʼಗೆ ಠಕ್ಕರ್‌ ನೀಡಲು ಸ್ವದೇಶಿ ನಿರ್ಮಿತ ʼಸಂದೇಶ್‌ʼ ಸಿದ್ಧ : ಡೌನ್ಲೋಡ್‌ ಮಾಡೊದ್ಹೇಗೆ ಗೊತ್ತಾ?

ʼವಾಟ್ಸಾಪ್‌ʼಗೆ ಠಕ್ಕರ್‌ ನೀಡಲು ಸ್ವದೇಶಿ ನಿರ್ಮಿತ ʼಸಂದೇಶ್‌ʼ ಸಿದ್ಧ : ಡೌನ್ಲೋಡ್‌ ಮಾಡೊದ್ಹೇಗೆ ಗೊತ್ತಾ?

ಡಿಜಿಟಲ್‌ ಡೆಸ್ಕ್:‌ ಸರ್ಕಾರವು 'ಸಂದೇಶ' ಎಂಬ ತ್ವರಿತ ಸಂದೇಶ ವೇದಿಕೆಯನ್ನ ಪ್ರಾರಂಭಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಹೊಸ ಪ್ಲಾಟ್ ಫಾರ್ಮ್ʼನ್ನ ಫೇಸ್ ಬುಕ್ ಒಡೆತನದ ಜನಪ್ರಿಯ ಜಾಗತಿಕ ಸಂದೇಶ ಸೇವೆ ವಾಟ್ಸಾಪ್ʼಗೆ ಭಾರತೀಯ ಪರ್ಯಾಯವಾಗಿ ನೋಡಲಾಗುತ್ತಿದೆ.

ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗವಾದ ರಾಷ್ಟ್ರೀಯ ಮಾಹಿತಿ ಕೇಂದ್ರವು ವಾಟ್ಸಾಪ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ವೇದಿಕೆಯನ್ನ ಪ್ರಾರಂಭಿಸಿದೆ. ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯೊಂದಿಗೆ ಎಲ್ಲಾ ರೀತಿಯ ಸಂವಹನಗಳಿಗೆ ಪ್ಲಾಟ್ ಫಾರ್ಮ್ ಅನ್ನು ಬಳಸಬಹುದು. ಪ್ರಸ್ತುತ ಸರ್ಕಾರಿ ನೌಕರರು ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಏಜೆನ್ಸಿಗಳು ಈ ಸಂದೇಶ್‌ ಅಪ್ಲಿಕೇಶನ್ ಬಳಕೆಯಾಗ್ತಿದೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೀಟ್ ವೈ ಅಡಿಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರವು ತ್ವರಿತ ಸಂದೇಶ ಸಂವಹನಕ್ಕಾಗಿ 'ಸಂದೇಶ್' ಅನ್ನೋ ದೇಶೀಯ ಪರಿಹಾರವನ್ನ ಅಭಿವೃದ್ಧಿಪಡಿಸಿದೆ ಎಂದು ಬುಧವಾರ ಹೇಳಿದರು.

'ಸ್ಯಾಂದೇಶ್‌ ಒಂದು ಮುಕ್ತ ಮೂಲ ಆಧಾರಿತ, ಸುರಕ್ಷಿತ, ಕ್ಲೌಡ್ ಸಕ್ರಿಯ ವೇದಿಕೆಯಾಗಿದ್ದು, ಸರ್ಕಾರಿ ಮೂಲಸೌಕರ್ಯದಲ್ಲಿ ಆಯೋಜಿಸಲಾಗುತ್ತದೆ. ಇದರಿಂದ ವ್ಯೂಹಾತ್ಮಕ ನಿಯಂತ್ರಣವು ಜಿಒಐನಲ್ಲಿ ಉಳಿಯುತ್ತದೆ. ಇದು ಒಂದರಿಂದ ಒಂದು ಮತ್ತು ಗುಂಪು ಸಂದೇಶ, ಫೈಲ್ ಮತ್ತು ಮಾಧ್ಯಮ ಹಂಚಿಕೆ, ಆಡಿಯೋ-ವೀಡಿಯೊ ಕರೆ ಮತ್ತು ಇ-ಗೋವ್ ಅಪ್ಲಿಕೇಶನ್ ಏಕೀಕರಣ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನೀದನ್ನ ಸರ್ಕಾರ ಬಳಸುತ್ತಿದ್ದು, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ʼನಲ್ಲಿ ಲಭ್ಯವಿದೆ' ಎಂದು ಚಂದ್ರಶೇಖರ್ ಹೇಳಿದರು.