ಶಿರಚ್ಛೇದದ ಬಳಿಕ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು; ಆಘಾತಕಾರಿ ಮಾಹಿತಿ ಬಹಿರಂಗ

ಶಿರಚ್ಛೇದದ ಬಳಿಕ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು; ಆಘಾತಕಾರಿ ಮಾಹಿತಿ ಬಹಿರಂಗ

ಜೈಪುರ: ಉದಯ್ ಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದದ ಬಳಿಕ ಹಂತಕರು ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ.

ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಟೈಲರ್ ಕನ್ಹಯ್ಯ ಲಾಲ್ ರನ್ನು ಇಬ್ಬರು ಹಂತಕರು ಬರ್ಬರವಾಗಿ ಹತ್ಯೆಗೈದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಗೆ ಇದೀಗ ಸ್ಫೋಟಕ ಮಾಹಿತಿ ಸಿಕ್ಕಿದ್ದು, ಹಂತಕರು ಜೈಪುರದಲ್ಲಿ ಜೂನ್ 30ರಂದು ಸರಣಿ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಆರೋಪಿ ರಿಯಾಜ್ ಅತ್ತಾರ್ ಐಸಿಸ್ ಭಾಗವಾಗಿರುವ ದಾವತ್-ಇ-ಇಸ್ಲಾಮಿಕ್ ಜತೆ ಸಂಪರ್ಕ ಹೊಂದಿದ್ದ ಹಾಗೂ ಆತ ಅಲ್ ಸುಫಾದ ಉದಯಪುರ ಮುಖ್ಯಸ್ಥನಾಗಿದ್ದ. ಐಸಿಸ್ ಉಗ್ರ ಮುಜೀಬ್ ಜತೆಯೂ ಸಂಪರ್ಕ ಹೊಂದಿದ್ದಾನೆ. ಐಸಿಸ್ ನಂಟು ಹೊಂದಿರುವ ಮುಜೀಬ್ ನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿದೆ.