ಹಾಸನ 'ಟಿಕೆಟ್‌ ದಂಗಲ್‌'ಗೆ ದೊಡ್ಡಗೌಡ್ರು ಎಂಟ್ರಿ: ಹೆಚ್‌ಡಿಕೆ ಕರೆದಿದ್ದ ಇಂದಿನ ಸಭೆ ಮುಂದೂಡಿಕೆ

ಹಾಸನ 'ಟಿಕೆಟ್‌ ದಂಗಲ್‌'ಗೆ ದೊಡ್ಡಗೌಡ್ರು ಎಂಟ್ರಿ: ಹೆಚ್‌ಡಿಕೆ ಕರೆದಿದ್ದ ಇಂದಿನ ಸಭೆ ಮುಂದೂಡಿಕೆ

ಹಾಸನ: ಹಾಸನ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಜೆಡಿಎಸ್‌ನಿಂದ ಟಿಕೇಟ ನೀಡುವ ಬಗ್ಗೆ ಜೆಡಿಎಸ್‌ನಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಒಂದು ಕಡೆ ಭವಾನಿ ರೇವಣ್ಣನವರು ಈಗಾಗಲೇ ಮತ ಭೇಟೆಯನ್ನು ಶುರು ಮಾಡಿದ್ದಾರೆ. ಆದರೆ ಹೆಚ್‌ಡಿ ಕುಮಾರಸ್ವಾಮಿಯವರು ಮಾತ್ರ ಪಾರ್ಟಿಯ ಕಾರ್ಯಕರ್ತರೊಬ್ಬರಿಗೆ ಟಿಕೇಟ್‌ ನೀಡಲಾಗುವುದು ಅಂಥ ತಿಳಿಸಿದ್ದು, ಈ ಮೂಲಕ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ.

ಹಾಸನದಲ್ಲಿ ಸ್ಪರ್ದೆ ಮಾಡಲು ಮಾಜಿ ಸಚಿವ ಹೆಚ್​.ಡಿ ರೆವಣ್ಣ ಅವರ ಪತ್ನಿ ಭವಾನಿ ರೇವಣ್ಣ ಉತ್ಸುಕರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸ್ವರೂಪ್​ ಅವರಿಗೆ ಟಿಕೆಟ್​ ಕೊಡಿಸಲು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಉತ್ಸುಕರಾಗಿದ್ದಾರೆ.

ಈ ನಡುವೆ ಇಂದು ಭಾನುವಾರ ಬೆಂಗಳೂರಿನ ಜೆ.ಪಿ. ಭವನದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಆಯ್ದ ಮುಖಂಡರ ಸಭೆಯನ್ನು ಹೆಚ್‌ಡಿಡಿ ಅವರ ಸೂಚನೆಯಂತೆ ಮುಂದೂಡಿಕೆ ಮಾಡಲಾಗಿದೆ ಎನ್ನಲಾಗಿದೆ.