ಎಂಎಲ್ಸಿ ಕಾರಿನ ನಂಬರ್ ಪ್ಲೇಟ್'ನ್ನೇ ನಕಲಿಸಿ ಮಾರಾಟಕ್ಕೆ ಯತ್ನಿಸಿದ ಭೂಪರು: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಎಂಎಲ್ಸಿ ಕಾರಿನ ನಂಬರ್ ಪ್ಲೇಟ್'ನ್ನೇ ನಕಲಿಸಿ ಮಾರಾಟಕ್ಕೆ ಯತ್ನಿಸಿದ ಭೂಪರು: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಬೆಂಗಳೂರು: ಬಹುತೇಕ ಶಾಸಕರು, ಪರಿಷತ್ ಸದಸ್ಯರು ಬಳಸುವಂತ ಕಾರಿನ ನಂಬರ್ ಫ್ಯಾನ್ಸಿಯಾಗಿತ್ತವೆ. ಇದನ್ನೇ ಬಂಡವಾಳ ಆಗಿ ಮಾಡಿಕೊಂಡ ಇಲ್ಲೊಂದು ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರರು, ಎಂಎಲ್ಸಿ ಕಾರಿನ ನಂಬರ್ ಪ್ಲೇಟ್ ಅನ್ನು ನಕಲು ಮಾಡಿ, ಮಾರಾಟಕ್ಕಿಟ್ಟ ಹಳೆಯ ಕಾರಿಗೆ ಹಾಕಿದ್ದರು.

ಇದು ಗೊತ್ತಾಗಿದ್ದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವಂತ ಐಕಾರ್ ಸ್ಟುಡಿಯೋದ ಶೋರೂಂನಲ್ಲಿ ಕಾರೊಂದು ಸೆಕೆಂಡ್ ಹ್ಯಾಂಡ್ ಕಾರೊಂದನ್ನು ನಿಲ್ಲಿಸಲಾಗಿತ್ತು. ಅದೇ ಮಾರ್ಗವಾಗಿ ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರ ಆಪ್ತ ಮಾದೇಶ್ ಎಂಬುವರು, ಇದು ಸಾಹೇಬರ ಕಾರ್ ನಂಬರ್ ಎಂಬುದನ್ನು ಗಮನಿಸಿದ್ದರು.

ಕೂಡಲೇ ಎಂಎಲ್ಸಿ ಭೋಜೇಗೌಡ ಅವರ ಗಮನಕ್ಕೆ ತಂದಾಗ, ನಂಬರ್ ಪ್ಲೇಟ್ ದುರ್ಬಳಕೆ ಬಗ್ಗೆ ದೂರು ನೀಡುವಂತೆ ಸೂಚಿಸಿದ್ದರು. ಹೀಗಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿದ್ದಂತ ಎಂಎಲ್ಸಿ ಭೋಜೇಗೌಡ ಆಪ್ತ ಮಾದೇಶ್, ಐಕಾರ್ ಸ್ಟುಡಿಯೋ ಶೋರೂಂ ಮಾಲೀಕರ ವಿರುದ್ಧ ದೂರು ನೀಡಿದ್ದರು.

ಈ ದೂರು ಆಧರಿಸಿ ಶೋರೂಂ ಮೇಲೆ ದಾಳಿ ಮಾಡಿದಂತ ಪೊಲೀಸರು, ಪರಿಷತ್ ಸದಸ್ಯ ಭೋಜೇಗೌಡ ಕಾರಿನ ನಂಬಲ್ ಪ್ಲೇಟ್ ನಕಲು ಮಾಡಿದಂತ ಕಾರನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಐಕಾರ್ ಸ್ಟುಡಿಯೋ ಶೋರೂಂ ಮಾಲೀಕ ಇಮ್ರಾನ್, ಮೈಸೂರು ಮೂಲದ ಶಾಬಾಜ್ ಖಾನ್ ಹಾಗೂ ಅಟ್ಟೂರು ಲೇಔಟ್ ನಿವಾಸಿ ಮಂಜುನಾಥ್ ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.