ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ 1 ದಿನದ ಸಂಬಳ: ಸಿಎಂಗೆ ಸಮ್ಮತಿಪತ್ರ ಹಸ್ತಾಂತರಿಸಿದ‌ ಸಂಘ

ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ 1 ದಿನದ ಸಂಬಳ: ಸಿಎಂಗೆ ಸಮ್ಮತಿಪತ್ರ ಹಸ್ತಾಂತರಿಸಿದ‌ ಸಂಘ

ಬೆಂಗಳೂರು: ಗೋಶಾಲೆಯ ಹಸುಗಳನ್ನು ಪೋಷಿಸುವ' ಪುಣ್ಯಕೋಟಿ ' ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ಸಂಬಳ ನೀಡುವ ಮೂಲಕ ಕೈಜೋಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕರೆಗೆ ಓಗೊಟ್ಟಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ನೇತೃತ್ವದ ನಿಯೋಗ ಶುಕ್ರವಾರ ಭೇಟಿಯಾಗಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳ 100 ಕೋಟಿ ರೂ.ಗಳನ್ನು ಪುಣ್ಯ ಕೋಟಿ ದತ್ತು ಯೋಜನೆಗೆ ದೇಣಿಗೆ ನೀಡುವ ಒಪ್ಪಿಗೆ ಪತ್ರವನ್ನು ಹಸ್ತಾಂತರಿಸಿದರು.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ, 30 ಜಿಲ್ಲಾ ಘಟಕಗಳ ಪ್ರತಿನಿಧಿಗಳು ಹಾಜರಿದ್ದರು.

ಈ ಯೋಜನೆಯಡಿ ಗೋಶಾಲೆಯ ಜಾನುವಾರು ನಿರ್ವಹಣಾ ವೆಚ್ಚ ವಾರ್ಷಿಕ 11,800 ರೂ. ನಿಗದಿಪಡಿಸಿದ್ದು, ಇದನ್ನು ಭರಿಸಲೆಂದು ಪುಣ್ಯ ಕೋಟಿ ದತ್ತು ಯೋಜನೆ ಮೂಲಕ ಸರ್ಕಾರ ಉತ್ತೇಜಿಸುತ್ತಿದೆ.