ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲು: ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಟನೆಯಿಂದ ಬ್ರೇಕ್: ಅಮೀರ್ ಖಾನ್ ಘೋಷಣೆ

ನಾನು ನಟನಾಗಿ ಸಿನಿಮಾ ಮಾಡುವಾಗ, ನನ್ನ ಜೀವನದಲ್ಲಿ ಬೇರೇನೂ ಆಗುವುದಿಲ್ಲ. ಸಿನಿಮಾದಲ್ಲಿ ನಾನು ತುಂಬಾ ಕಳೆದುಹೋಗುತ್ತೇನೆ. ನಾನು ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ನನ್ನ ಕುಟುಂಬದೊಂದಿಗೆ, ನನ್ನ ತಾಯಿ, ನನ್ನ ಮಕ್ಕಳೊಂದಿಗೆ ಇರಲು ಬಯಸುತ್ತೇನೆ ಎಂದಿದ್ದಾರೆ. ಇದು ಬಹುಶಃ ನನ್ನ 35 ವರ್ಷಗಳ ವೃತ್ತಿಜೀವನದಲ್ಲಿ ನಾನು ತೆಗೆದುಕೊಳ್ಳುತ್ತಿರುವ ಮೊದಲ ವಿರಾಮ.
ನಾನು 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸದ ಮೇಲೆ ಮಾತ್ರ ಗಮನಹರಿಸಿದ್ದೇನೆ ಎಂದಿದ್ದಾರೆ. ನಾನು ಮುಂದಿನ ವರ್ಷಕ್ಕಾಗಿ ಎದುರು ನೋಡುತ್ತಿದ್ದೇನೆ. ಒಂದೂವರೆ ವರ್ಷ ನಾನು ನಟನಾಗಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಅಮೀರ್ ಖಾನ್ ಇತ್ತೀಚೆಗೆ ಅಪರೂಪದ ಲುಕ್ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು, ಅವರ ಇತ್ತೀಚಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್ನಲ್ಲಿ ಫೇಲ್ ಆದ ನಂತರ ಮೊದಲ ಬಾರಿ ಈ ರೀತಿ ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀರ್ ತಮ್ಮ ಬೆಳ್ಳಿ ಕೂದಲು ಮತ್ತು ಗಡ್ಡವನ್ನು ನ್ಯಾಚುರಲ್ ಲುಕ್ನಲ್ಲಿ ತೋರಿಸಿದ್ದಾರೆ.