ಬೀದರ್: ಪರಿಷತ್ ಚುನಾವಣಾ ( Karnataka Council Election ) ಪ್ರಚಾರದಲ್ಲಿ ತೊಡಗಿದ್ದಂತ ಸಿಎಂ ಬಸವರಾಜ ಬೊಮ್ಮಾಯಿ ( Chief Minister Basavaraj Bommai ), ವೇದಿಕೆಯಲ್ಲಿ ಭಾಷಣ ಮಾಡ್ತಾ ಇದ್ದರೇ, ವೇದಿಕೆಯ ಪಕ್ಕದಲ್ಲೇ ನಿಂತಿದ್ದಂತ ಪಿಎಸ್‌ಐ-ಪೊಲೀಸ್ ಸಿಬ್ಬಂದಿಗಳಿಬ್ಬರು ಗುಸು ಗುಸು, ಪಿಸು ಪಿಸು ಅಂತ ಮಾತನಾಡ್ತಾ ನಿಂತಿದ್ದರು.
ಇದರಿಂದ ಡಿಸ್ಟರ್ಬ್ ಆದಂತ ಸಿಎಂ ಬಸವರಾಜ ಬೊಮ್ಮಾಯಿ ಸಿಟ್ಟಾದ್ರು.ಬೀದರ್ ನ ಘಾಳೆ ಪಂಕ್ಷನ್ ಹಾಲ್ ನಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಮಾತನ್ನು ಆರಂಭಿಸಿದ ಸಂದರ್ಭದಲ್ಲಿ, ವೇದಿಕೆ ಸಮೀಪವೇ ಮಹಿಳಾ ಪಿಎಸ್‌ಐ ಹಾಗೂ ಪೊಲೀಸ್ ಅಧಿಕಾರಿಗಳಿಬ್ಬರು ಗುಸು ಗುಸು, ಪಿಸು ಪಿಸು ಅಂತ ಮಾತನಾಡುತ್ತಿದ್ದರು.ಹೀಗೆ ಭಾಷಣದ ಸಂದರ್ಭದಲ್ಲೇ ಮಾತನಾಡುತ್ತಿದ್ದರಿಂದ ಡಿಸ್ಟರ್ಬ್ ಆದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಮಹಿಳಾ ಪಿಎಸ್‌ಐ ಸೇರಿದಂತೆ ಪೊಲೀಸ್ ಸಿಬ್ಬಂದಿಗಳನ್ನು ಸಮಾರಂಭದಿಂದ ಹೊರಗೆ ಕಳುಹಿಸುವಂತೆ ಗರಂ ಆಗಿ ಸೂಚಿಸಿದರು.ನಿಮ್ಮಗಳ ಅಗತ್ಯವಿಲ್ಲ. ಎಲ್ಲಾ ನಮ್ಮ ಕಾರ್ಯಕರ್ತರೇ ನೋಡಿಕೊಳ್ಳುತ್ತಾರೆ. ನೀವು ಹೊರಗೆ ಹೋಗಿ ಎಂಬುದಾಗಿ ಸಮಾವೇಶದ ವೇದಿಕೆಯಲ್ಲೇ ಸಿಎಂ ಸೂಚಿಸುತ್ತಿದ್ದಂತೆ, ನೆರೆದಿದ್ದಂತ ಕಾರ್ಯಕರ್ತರು ಜೋರಾಗಿ ಕೇಕೆ ಹಾಕಿದ್ದೂ ಕಂಡು ಬಂದಿತು.